ನವದೆಹಲಿ,ಜುಲೈ,1,2021(www.justkannada.in): ಮಕ್ಕಳ ಮೇಲೆ ಕೋವೊವ್ಯಾಕ್ಸ್ ಲಸಿಕೆ ಪ್ರಯೋಗ ಮಾಡಲು ಅನುಮತಿ ನೀಡಬಾರದು ಎಂದು ಡಿಸಿಜಿಐಗೆ ಕೇಂಧ್ರ ಸರ್ಕಾರದ ತಜ್ಞರ ಸಮಿತಿ ಶಿಫರಸು ಮಾಡಿದೆ.
ಕೋವೊವ್ಯಾಕ್ಸ್ ಲಸಿಕೆ ಮಕ್ಕಳ ಮೆಲೆ ಪ್ರಯೋಗ ಮಾಡಲು ಪುಣೆಯ ಸೆರಮ್ ಇನ್ ಸ್ಟಿಟ್ಯೂಟ್ ಗೆ ಅವಕಾಶ ಕೊಡಬೇಡಿ ಎಂದು ಕೇಂದ್ರದ ತಜ್ಞರ ಸಮಿತಿ ಡಿಸಿಜಿಐಗೆ ಶಿಫಾರಸು ಮಾಡಿದೆ.
2-17 ವರ್ಷದ ಮಕ್ಕಳ ಮೇಲೆ ಕೋವೊವ್ಯಾಕ್ಸ್ 2 ಹಾಗೂ 3ನೇ ಹಂತದ ಪ್ರಯೋಗಕ್ಕೆ ಸೆರಮ್ ಮುಂದಾಗಿತ್ತು. ಆದರೆ ಈಗಲೇ ಮಕ್ಕಳ ಮೇಲೆ ಪ್ರಯೋಗ ಮಾಡಲು ಅವಕಾಶ ನೀಡಬಾರದು ಎಂದು ಡಿಸಿಜಿಐಗೆ ಕೇಂದ್ರದ ತಜ್ಞರ ಸಮಿತಿ ಮನವಿ ಮಾಡಿದೆ ಎನ್ನಲಾಗಿದೆ.
ಮೊದಲು ವಯಸ್ಕರರ ಮೇಲೆ ಪ್ರಯೋಗ ಪೂರ್ಣಗೊಳ್ಳಲಿ ನಂತರದಲ್ಲಿ ಮಕ್ಕಳ ಮೇಲೆ ಲಸಿಕೆ ಪ್ರಯೋಗ ಮುಂದುವರೆಸುವುದು ಉತ್ತಮ ಎಂದು ಕೇಂದ್ರ ತಜ್ಞರ ಸಮಿತಿ ತಿಳಿಸಿದೆ.
Key words: no need experiment – coovox- vaccine –children-DCGI