ನವದೆಹಲಿ,ಅಕ್ಟೋಬರ್,20,2020(www.justkannada.in): ಕೊರೋನಾ ವಿರುದ್ದಧ ಹೋರಾಟದಲ್ಲಿ ಜನ ಕಷ್ಟಪಟ್ಟಿದ್ದಾರೆ. ಕೊರೋನಾ ನಮ್ಮನ್ನ ಬಿಟ್ಟು ತೊಲಗಿಲ್ಲ. ಔಷಧಿ ಸಿಗುವವರೆಗೆ ಕೊರೋನಾ ಬಗ್ಗೆ ನಿರ್ಲಕ್ಷ್ಯ ಬೇಡವೇ ಬೇಡ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಕೊರೋನಾ ಕುರಿತು ದೇಶವನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ಮೋದಿ ಹೇಳಿದ್ದಿಷ್ಟು…
ಕೊರೋನಾ ವಿರುದ್ದಧ ಹೋರಾಟದಲ್ಲಿ ಜನ ಕಷ್ಟಪಟ್ಟಿದ್ದಾರೆ. ನಮ್ಮಲ್ಲಿ ಜನ ಹೆಚ್ಚು ಜವಾಬ್ದಾರಿ ನಿಭಾಯಿಸಲು ಮನೆಯಿಂದ ಹೊರಬರುತ್ತಿದ್ದಾರೆ. ಕೊರೋನಾ ವಿರುದ್ಧದ ಹೋರಾಟದಲ್ಲಿ ನಮಗೆ ಜಯ ಸಿಕ್ಕಿದೆ. ಆರ್ಥಿಕ ಪರಿಸ್ಥಿತಿಯೂ ಸುಧಾರಿಸುತ್ತಿದೆ. ಕೊರೋನಾದಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ.
ಕೊರೋನಾದಿಂದ ಏನು ಆಗಿಲ್ಲ ಎಂದು ಜನ ಓಡಾಡುತ್ತಿದ್ದಾರೆ. ಆದರೆ ಅವರು ಸುರಕ್ಷಿತವಾಗಿಲ್ಲ. ಹಬ್ಬಹರಿದಿನಗಳು ನಮಗೆ ಖುಷಿ. ಹಬ್ಬಗಳಿರುವ ಹಿನ್ನೆಲೆ ಜನ ಓಡಾಡುತ್ತಿದ್ದಾರೆ. ಹಬ್ಬದ ಸಮಯದಲ್ಲಿ ಜನ ಮಾರುಕಟ್ಟೆಗೆ ಹೋಗುತ್ತಿದ್ದಾರೆ. ಆದರೆ ಕೊರೋನಾ ನಮ್ಮನ್ನ ಬಿಟ್ಟು ತೊಲಗಿಲ್ಲ. ಪ್ರತಿ 10 ಲಕ್ಷ ಜನರಲ್ಲಿ 83 ಜನ ಕೊರೋನಾಗೆ ಬಲಿಯಾಗಿದ್ದಾರೆ.
ಕೊರೋನಾ ಮಹಾಮಾರಿ ವಿರುದ್ಧದ ಹೋರಾಟದಲ್ಲಿ ಟೆಸ್ಟಿಂಗ್ ಹೆಚ್ಚಾಗಿದೆ. ಕೊರೋನಾ ಬಗ್ಗೆ ನಿರ್ಲಕ್ಷ್ಯ ಬೇಡ.. ಮಾಸ್ಕ್ ಧರಿಸದೇ ಕುಟುಂಬ ಮಕ್ಕಳನ್ನು ಅಪಾಯಕ್ಕೆ ದೂಡುತ್ತಿದ್ದೀರಿ. ಕೊರೋನಾ ನಿಯಮ ಪಾಲಿಸದೇ ಇರುವುದು. ಮಾಸ್ಕ್ ಧರಿಸದೇ ಓಡಾಡುವುದು ಅಪಾಯಕಾರಿ.
ಪ್ರತಿಯೊಬ್ಬರಿಗೂ ಲಸಿಕೆ ತಲುಪಿಸುವ ವ್ಯವಸ್ಥೆ ಮಾಡುತ್ತೇವೆ. ಎಲ್ಲಿ ನಮ್ಮ ದೇಶದ ವಿಜ್ಞಾನಿಗಳು ಕೂಡ ಜೀವ ಪಣಕ್ಕಿಟ್ಟು ಲಸಿಕೆ ಸಂಶೋಧನೆಯಲ್ಲಿದ್ದಾರೆ. ಎಲ್ಲಿವರೆಗೂ ಕೊರೋನಾ ವ್ಯಾಕ್ಸಿನ್ ಬರುವುದಿಲ್ಲವೋ ಅಲ್ಲಿವರೆಗೆ ಕೊರೋನಾ ವಿರುದ್ಧ ಹೋರಾಡಬೇಕು. ಔಷಧಿ ಸಿಗುವವರೆಗೆ ಕೊರೋನಾ ಬಗ್ಗೆ ನಿರ್ಲಕ್ಷ್ಯ ಬೇಡವೇ ಬೇಡ ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.
Key words: No need – ignore- Corona -medicine – available – Prime Minister -Modi