ಸ್ವಾಮೀಜಿ ಹೇಳಿಕೆಗೆ ತುಂಬಾ ಮಹತ್ವ ಕೊಡುವ ಅವಶ್ಯಕತೆ ಇಲ್ಲ- ಸಿಎಂ ಸಿದ್ದರಾಮಯ್ಯ

ನವದೆಹಲಿ,ಜೂನ್,28,2024 (www.justkannada.in): ಡಿಸಿಎಂ ಡಿಕೆ ಶಿವಕುಮಾರ್ ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡಿ ಎಂಬ ಚಂದ್ರಶೇಖರ ಸ್ವಾಮೀಜಿ ಹೇಳಿಕೆ ಕುರಿತು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ನವದೆಹಲಿಯಲ್ಲಿ ಈ ಕುರಿತು ಮಾತನಾಡಿದ ಸಿಎಂ ಸಿದ್ದರಾಮಯ್ಯ,  ಸ್ವಾಮೀಜಿ ಹೇಳಿಕೆಗೆ ತುಂಬಾ ಮಹತ್ವ ಕೊಡುವ ಅವಶ್ಯಕತೆ ಇಲ್ಲ.  ಸ್ವಾಮೀಜಿಗೂ ರಾಜಕೀಯ ಪಕ್ಷಕ್ಕೂ ಏನಾದ್ರೂ ಸಂಬಂಧ ಇದೆಯಾ..? ಸಿಎಂ ಯಾರಾಗಬೇಕೆಂದು ತೀರ್ಮಾನಿಸೋದು ಯಾರು? . ಪ್ರಜಾಪ್ರಭುತ್ವದಲ್ಲಿ ಸಿಎಂ ಯಾರಾಗಬೇಕೆಂದು ಶಾಸಕರು ತೀರ್ಮನಿಸುತ್ತಾರೆ. ಅಷ್ಟೆ ಅಲ್ಲದೆ ಹೈಕಮಾಂಡ್ ಕೂಡ ನಿರ್ಧಾರ ಮಾಡುತ್ತದೆ ಎಂದು ಹೇಳಿದರು.

ನಿನ್ನೆ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದ ವೇದಿಕೆಯಲ್ಲೇ ಡಿಕೆ ಶಿವಕುಮಾರ್ ಗೆ ಸಿಎಂ ಸ್ಥಾನ ಬಿಟ್ಟುಕೊಡುವಂತೆ ಸಿದ್ದರಾಮಯ್ಯಗೆ ಚಂದ್ರಶೇಖರ ಸ್ವಾಮೀಜಿ ಹೇಳಿದ್ದರು. ಈ ಬೆನ್ನಲ್ಲೆ  ಶ್ರೀಶೈಲ ಜಗದ್ಗುರು ಶ್ರೀಗಳು ಸಹ ಸಿಎಂ ಬದಲಾವಣೆ ಮಾಡುವುದಾದರೇ ವೀರಶೈವ ಲಿಂಗಾಯತ ಸಮುದಾಯಕ್ಕೆ ಅವಕಾಶ ನೀಡಬೇಕು ಎಂದಿದ್ದರು.

Key words: no need,  importance, Swamiji, statement, CM Siddaramaiah