ಇಡಿ ಅಧಿಕಾರಿಗಳ ದಾಳಿ ಅವಶ್ಯಕತೆ ಇರಲಿಲ್ಲ- ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಜುಲೈ,11,2024 (www.justkannada.in):  ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ಬಹುಕೋಟಿ ಹಗರಣ ಸಂಬಂಧ ಮಾಜಿ ಸಚಿವ ಬಿ.ನಾಗೇಂದ್ರ ಮತ್ತು ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ನಿವಾಸದ ಮೇಲೆ ಇಡಿ ದಾಳಿ ಕುರಿತು ಡಿಸಿಎಂ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್,  ರಾಜ್ಯಸರ್ಕಾರವೇ ಎಸ್ ಐಟಿ ತನಿಖೆಗೆ ಆದೇಶ ನೀಡಿದೆ ಈಗಾಗಲೇ ಎಸ್ ಐಟಿ ಅಧಿಕಾರಿಗಳುತನಿಖೆ ನಡೆಸುತ್ತಿದ್ದಾರೆ ಕಾನೂನು ಪ್ರಕಾರ ತನಿಖೆ ನಡೆಯುತ್ತಿದೆ.  ಹೀಗಾಗಿ ಇಡಿ ಅಧಿಕಾರಿಗಳು ದಾಳಿ ಮಾಡುವ ಅವಶ್ಯಕತೆ ಇರಲಿಲ್ಲ ಎಂದರು.

ಎನ್ ಆರ್ ರಮೇಶ್ ದೂರು ನೀಡಿದ್ದಾರೆ ಎಂದು ಇಡಿ ದಾಳಿ ಮಾಡಲ್ಲ  ಯರ್ಯಾರೋ ದೂರು ನೀಡಿದರೇ ದಾಳಿ ಮಾಡಲು ಆಗಲ್ಲ. ಅದಕ್ಕೆಲ್ಲಾ ಕೆಲ ನಿಯಮಗಳಿವೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.

Key words: no need, raid, ED officials, DCM, DK Shivakumar