ಇಡಿ ತನಿಖೆಗೆ ನಮ್ಮ ತಕರಾರು ಇಲ್ಲ: ಆದ್ರೆ ಅಸ್ತ್ರವಾಗಿ ಬಳಸಿಕೊಳ್ಳಬಾರದು- ಗೃಹ ಸಚಿವ ಪರಮೇಶ್ವರ್

ಬೆಂಗಳೂರು,ಜುಲೈ,13,2024 (www.justkannada.in): ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ಅಕ್ರಮ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯದ ತನಿಖೆಗೆ ನಮ್ಮ ತಕರಾರು ಇಲ್ಲ ಆದರೆ ಇದನ್ನೇ ಕೇಂದ್ರ ಸರ್ಕಾರ ಅಸ್ತ್ರವನ್ನಾಗಿ ಬಳಸಿಕೊಳ್ಳಬಾರದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ಈ ಕುರಿತು ಇಂದು ಮಾತನಾಡಿದ ಡಾ.ಜಿ.ಪರಮೇಶ್ವರ್,  ಪ್ರಕರಣದಲ್ಲಿ ಇದ್ದಕ್ಕಿಂದಂತೆ ಇಡಿ ಎಂಟ್ರಿಯಾಗಿದೆ. ಇಡಿ ತನಿಖೆಗೆ ನಮ್ಮ ತಕರಾರು ಇಲ್ಲ. ಕೇಂದ್ರ ಇಡಿಯನ್ನ ಅಸ್ತ್ರವನ್ನಾಗಿ ಬಳಸಿಕೊಳ್ಳಬಾರದು. ಪ್ರಕರಣ ಸಂಬಂಧ ಮಾಜಿ ಸಚಿವ ಬಿ. ನಾಗೇಂದ್ರ, ಶಾಸಕ ಬಸನಗೌಡ ದದ್ದಲ್ ರನ್ನ ಎಸ್ ಐಟಿ ವಿಚಾರಣೆ ನಡೆಸುತ್ತಿದೆ. ಹೀಗಾಗಿ ಸಿಬಿಐ ಇಡಿ ಬಳಸಿ ರಾಜಕೀಯ ಮಾಡಲು ಮುಂದಾಗಬಾರದು ಎಂದರು.

ಬಸನಗೌಡ ದದ್ದಲ್ ನಾಪತ್ತೆ ಎಂಬ ಸುದ್ದಿ ಹರಡಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್,   ದದ್ದಲ್  ಎಲ್ಲೂ ಹೋಗಿಲ್ಲ. ಇಲ್ಲೇ ಓಡಾಡಿಕೊಂಡು ಇದ್ದಾರೆ  ಎಂದು ಸ್ಪಷ್ಟಪಡಿಸಿದರು.

Key words: no objection, ED, investigation, Minister, Parameshwar