ಮೈಸೂರು,ನವೆಂಬರ್,10,2021(www.justkannada.in): ಟಿಪ್ಪು ಜಯಂತಿ ಆಚರಣೆಗೆ ಪೋಲಿಸ್ ಇಲಾಖೆಯಿಂದ ಅನುಮತಿ ನಿರಾಕರಿಸಿದ ಹಿನ್ನೆಲೆ ಮೈಸೂರು ಪೊಲೀಸರ ವಿರುದ್ಧ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಬೇಸರ ಹೊರ ಹಾಕಿದ್ದಾರೆ.
ಟಿಪ್ಪು ಜಯಂತಿ ಆಚರಣೆಗೆ ಅನುಮತಿ ನೀಡುವಂತೆ ಶಾಸಕ ತನ್ವೀರ್ ಸೇಠ್ ಸಲ್ಲಿಸಿದ್ದ ಅನುಮತಿ ಪತ್ರವನ್ನ ಮೈಸೂರು ಪೋಲೀಸರು ನಿರಾಕರಿಸಿದರು. ಈ ಸಂಬಂಧ ಮಾತನಾಡಿದ ಶಾಸಕ ತನ್ವೀರ್ ಸೇಠ್ , ಧಾರ್ಮಿಕ ಆಚರಣೆಗೆ ಪೋಲಿಸರಿಂದ ಅನುಮತಿ ಸಿಕ್ಕಿಲ್ಲ.ಕಳೆದ ರಾತ್ರಿ ಅನುಮತಿ ಪತ್ರವನ್ನ ತಿರಸ್ಕರಿಸಿರುವ ವಿಚಾರ ನನಗೆ ತಿಳಿಯಿತು. ಧಾರ್ಮಿಕ ಆಚರಣೆಗೂ ಅನುಮತಿ ತಿರಸ್ಕರಿಸಿರುವುದು ಬೇಸರ ತಂದಿದೆ. ಮುಸಲ್ಮಾನ ಬಂಧುಗಳ ಜೊತೆ ಯಾವ ಸರ್ಕಾರಗಳು ಚೆಲ್ಲಾಟ ಆಡಬೇಡಿ ಅದು ನಮ್ಮದೇ ಕಾಂಗ್ರೆಸ್ ಸರ್ಕಾರ ಇರಬಹುದು ಇತರೆ ಯಾವುದೇ ಇರಬಹುದು ಎಂದು ಅಸಮಾಧಾನ ಹೊರಹಾಕಿದರು.
ಟಿಪ್ಪು ಜಯಂತಿ ಮಾಡಿ ಎಂದು ನಾವೇನು ಅರ್ಜಿ ಹಾಕಿಕೊಂಡಿರಲಿಲ್ಲ. ಆದರೂ ಕಾಂಗ್ರೆಸ್ ಸರ್ಕಾರ ಮಾಡಿತ್ತು. ಆದರೆ ಇಂದು ಟಿಪ್ಪು ಜಯಂತಿಯನ್ನ ಸರ್ಕಾರ ನಿಷೇಧಿಸಿದೆ. ಶ್ರೀರಂಗಪಟ್ಟಣದಲ್ಲಿ ನಿಷೇದಾಜ್ಞೆ ಜಾರಿ ಮಾಡಲಾಗಿದೆ. ಟಿಪ್ಪುವಿನ ಇತಿಹಾಸ ತಿಳಿಯದ ಈ ಸರ್ಕಾರದಿಂದ ನಾವೇನು ನಿರೀಕ್ಷಿಸಲು ಸಾಧ್ಯವಿಲ್ಲ. ಇತಿಹಾಸವನ್ನು ತಿರುಚುವ ಕೆಲಸ ಮಾಡಿದ್ದಾರೆ ಎಂದು ತನ್ವೀರ್ ಸೇಠ್ ತಿಳಿಸಿದರು.
ಹುಲಿ ಜಯಂತಿಯನ್ನ ಹುಲಿಗಳೆ ಮಾಡಬೇಕು- ಉರುಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ
ಇನ್ನು ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಉರುಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ, ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ದಾರೆ. ಯಾರು ಇತಿಹಾಸವನ್ನು ಮರೆಯುತ್ತಾರೊ ಅವರು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ. ಟಿಪ್ಪು ಸಲ್ತಾನ್ ಬಿಟ್ಟು ಭಾರತದ ಇತಿಹಾಸ ಇಲ್ಲ. ಯಾರು ಬೇಕಾದರೂ ತಿರುಚಬಹುದು. ಆದರೆ ಪಾಶ್ಚಾತ್ಯರು, ಇತಿಹಾಸ ತಜ್ಞರು ಟಿಪ್ಪು ಬಿಟ್ಟು ಇತಿಹಾಸ ಇರಲಾರದು ಎಂದಿದ್ದಾರೆ. ಉಳ್ಳವರ ಕೈಲಿ ಪ್ರಜಾಪ್ರಭುತ್ವ ಸಿಲುಕಿದೆ. ಭಾರತದ ಸಂವಿಧಾನ ಎಲ್ಲರಿಗೂ ಸಮಾನ ಅವಕಾಶ ಕೊಟ್ಟಿದೆ. ಆದರೆ ಟಿಪ್ಪು ಆಚರಣೆಗೆ ಮಾಡಬಾರದು ಎನ್ನುತ್ತಾರೆ. ದೇಶ ದ್ರೋಹಿ ಅಂತ ಟಿಪ್ಪು ಕರೀತಿರಿ. ಟಿಪ್ಪು ಈ ಭಾರತ ದೇಶದ ವಜ್ರ ಅಂತ ಮಹಾತ್ಮಾ ಗಾಂಧಿ ಹೇಳಿದ್ದಾರೆ. ಆಗಾದ್ರೆ ಮಹಾತ್ಮಾ ಗಾಂಧಿಯನ್ನು ದೇಶ ವಿರೋಧಿ ಸಾಲಿಗೆ ಸೇರಿಸ್ತೀರಾ..? ಎಂದು ಪ್ರಶ್ನಿಸಿದರು.
ಹುಲಿ ಜಯಂತಿಯನ್ನ ಹುಲಿಗಳೆ ಮಾಡಬೇಕು. ಇಲಿಗಳು ಹುಲಿ ಜಯಂತಿ ಮಾಡಲಾಗದು. ಇಲಿಗಳು ಬಿಲ ಕೊರೆಯುವ ಕೆಲಸ ಮಾಡುತ್ತಿವೆ. ಇಲಿಗಳ ಸಂಖ್ಯೆ ಜಾಸ್ತಿಯಾಗಿ ಬಿಲಕೊರೆದು ದೇಶವನ್ನ ಮಾರಾಟ ಮಾಡುತ್ತಿವೆ ಎಂದು ಉರುಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಹೇಳಿದರು.
Key words: no permission -Tipu Jayanthi –celebration-MLA-Tanveer Sait -against – police.