ಮೈಸೂರು, ಡಿಸೆಂಬರ್ 06, 2020 (www.justkannada.in): ಕೋವಿಡ್ ಹಿನ್ನೆಲೆಯಲ್ಲಿ ಬೇಲದಕುಪ್ಪೆ ಮಹದೇಶ್ವರ ಜಾತ್ರೆ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಲಾಗಿದೆ.
ಡಿಸೆಂಬರ್ 13 ರಿಂದ 16 ವರೆಗೆ ನಡೆಯುವ ಜಾತ್ರೆಯ ನಾಲ್ಕೂ ದಿನಗಳು ಸಾರ್ವಜನಿಕ ಪ್ರವೇಶಕ್ಕೆ ನಿರ್ಭಂದ ಹೇರಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶ ಹೊರಡಿಸಿದ್ದಾರೆ.
ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ನಡೆಯುವ ಜಾತ್ರೆ ಇದಾಗಿದೆ. ಬಂಡಿಪುರ ಅರಣ್ಯ ವ್ಯಾಪ್ತಿ ಯಡಿಯಾಲ ವಲದ ಅರಣ್ಯದೊಳಗೆ ಬೇಲದಕುಪ್ಪೆ ಮಹದೇಶ್ವರ ದೇವಾಲಯ ಇದೆ. ಕೇವಲ ದೇವಸ್ಥಾನದ ಆಡಳಿತ ಮಂಡಳಿಯವರಿಗೆ ಮಾತ್ರ ಅವಕಾಶ ನೀಡಲಾಗಿದೆ.
ಧಾರ್ಮಿಕ ವಿಧಿ ವಿಧಾನದಂತೆ ಸರಳ ಆಚರಣೆಗೆ ಮಾತ್ರ ಅವಕಾಶ ನೀಡಲಾಗಿದೆ. ಪ್ರತಿ ವರ್ಷ ಲಕ್ಷಾಂತರ ಜನ ಭಾಗವಹಿಸುತ್ತಿದ್ದ ಜಾತ್ರಾಮಹೋತ್ಸವ. ವನ್ಯಜೀವಿ ಹಾಗೂ ಸಾರ್ವಜಕಿಕರ ಹಿತದೃಷ್ಟಿಯಿಂದ ಕ್ರಮಕ್ಕೆ ನಿರ್ಭಂಧ
ವಿಧಿಸಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶಿಸಿದ್ದಾರೆ.