ಬೆಂಗಳೂರು,ಡಿಸೆಂಬರ್,30,2024 (www.justkannada.in): ಗುತ್ತಿಗೆದಾರ ಸಚಿವ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೀನಾಮೆ ನೀಡುವಂತೆ ಆಗ್ರಹಿಸುತ್ತಿರುವ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿರುವ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ, ಎಷ್ಟೇ ಚೀರಾಡಿದ್ರೂ ಬಟ್ಟೆ ಹರಿದುಕೊಂಡ್ರೂ ರಾಜೀನಾಮೆ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ವಿಜಯೇಂದ್ರ ವಿರುದ್ದ ಮನಿಲಾಂಡರಿಂಗ್ ಕೇಸ್ ಇದೆ. ಯಾಗೆ ರಾಜೀನಾಮೆ ನೀಡಿಲ್ಲ. ನನ್ನ ವಿರುದ್ದ ಯಾವುದಾದರೂ ದಾಖಲೆ ಇದ್ದರೇ ತೋರಿಸಿ. ನನ್ನ ರಾಜೀನಾಮೆ ಕೇಳಲು ಬಿವೈ ವಿಜಯೇಂದ್ರ ಏನು ಸುಪ್ರೀಂಕೋರ್ಟಾ? ಬಿವೈ ವಿಜಯೇಂದ್ರ ಮಾತಿಗೆ ಬಿಜೆಪಿಯಲ್ಲೇ ಕಿಮ್ಮತ್ತಿಲ್ಲ. ಉಳಿದವರು ಯಾಕೆ ಅವರ ಮಾತಿಗೆ ಕಿಮ್ಮತ್ತು ಕೊಡಬೇಕು ಎಂದರು.
ನನ್ನ ಮನೆಗೆ ಮುತ್ತಿಗೆ ಹಾಕಲು ಎಷ್ಟು ಜನ ಬರ್ತೀರಾ ಮೊದಲೇ ಹೇಳಿ ಅಷ್ಟು ಜನರಿಗೆ ಟೀ ವ್ಯವಸ್ಥೆ ಮಾಡುತ್ತೇವೆ ಎಂದು ಲೇವಡಿ ಮಾಡಿದ ಪ್ರಿಯಾಂಕ್ ಖರ್ಗೆ, ರಾಜು ಕಪನೂರು ನನ್ನ ಆಪ್ತ ಅಲ್ಲ ಎಂದು ಹೇಳಿಲ್ಲ. ಮೊದಲು ಬಿಜೆಪಿಯಲ್ಲಿದ್ದು ನಂತರ ಕಾಂಗ್ರೆಸ್ ಗೆ ಬಂದಿದ್ದಾರೆ ಎಂದರು.
Key words: no question, resigning, Priyank Kharge