ಮೈಸೂರು,ಜು,16,2020(www.justkannada.in): ಕೊರೊನಾ ಸಂದರ್ಭದಲ್ಲಿ ರಕ್ತದಾನ ಶಿಬಿರಗಳು ಕಡೆಮೆಯಾಗಿವೆ. ಆದರೂ ಸಹ ಬ್ಲಡ್ ಬ್ಯಾಂಕ್ ನಲ್ಲಿ ರಕ್ತದ ಕೊರತೆ ಇಲ್ಲ ಎಂದು ಕೆ.ಆರ್.ಆಸ್ಪತ್ರೆ ರಕ್ತನಿಧಿ ಅಧಿಕಾರಿ ಮಂಜುನಾಥ್ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ರಕ್ತನಿಧಿ ಅಧಿಕಾರಿ ಮಂಜುನಾಥ್, ಕೊರೊನಾ ಸಂದರ್ಭದಲ್ಲಿ ರಕ್ತದಾನ ಶಿಬಿರಗಳು ಕಡೆಮೆಯಾಗಿವೆ. ಮೊದಲು ಡೋನರ್ ಇಲ್ಲದಿದ್ರೂ ರಕ್ತ ನೀಡಲಾಗುತ್ತಿತ್ತು. ಆದರೆ ಈಗ ರಕ್ತ ಕೊಡುವಂತೆ ಕೇಳುವ ಪರಿಸ್ಥಿತಿ ಬಂದಿದೆ. ಮೂರು ಯುನಿಟ್ ರಕ್ತ ಪಡೆದರೆ ರೋಗಿ ಕಡೆಯ ಒಬ್ಬರು ರಕ್ತದಾನ ಮಾಡಬೇಕಾಗುತ್ತೆ. ಬ್ಲಡ್ ಕ್ಯಾಂಪ್ ಗಳು ನಡೆಸಲಾಗದ ಹಿನ್ನೆಲೆ ರಕ್ತದಾನ ಮಾಡುವಂತೆ ಮನವಿ ಮಾಡ್ತಿದ್ದೇವೆ. ತುರ್ತುಚಿಕಿತ್ಸೆಗೆ ಯಾವುದೇ ಷರತ್ತುಗಳಿಲ್ಲದೇ ರಕ್ತ ನೀಡಲಾಗುವುದು. ಅಲ್ಲದೇ ಅವಶ್ಯಕತೆ ಇರುವ ತಾಲ್ಲೂಕು ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಿಗೂ ರಕ್ತ ನೀಡಲಾಗುತ್ತಿದೆ ಎಂದು ತಿಳಿಸಿದರು.
ಮೊದಲು ಪ್ರತಿದಿನ 40ರಿಂದ 50 ಜನ ರಕ್ತದಾನ ಮಾಡುತ್ತಿದ್ದರು. ಈಗ 25 ರಿಂದ 30 ಜನ ರಕ್ತದಾನ ಮಾಡುತ್ತಿದ್ದಾರೆ. ಮೊದಲು ಪ್ರತಿ ತಿಂಗಳು ಕೆ.ಆರ್.ಆಸ್ಪತ್ರೆಯಲ್ಲಿ 1500 ಯೂನಿಟ್ ಶೇಖರಣೆ ಮಾಡಲಾಗುತ್ತಿತ್ತು. ಆದರೆ ಕ್ಯಾಂಪ್ ಗಳು ಕಡೆಮೆಯಾದ್ದರಿಂದ ಈಗ 1150ರಿಂದ 1200ಯೂನಿಟ್ ಸಂಗ್ರಹಣೆ ಮಾಡಲಾಗಿದೆ. ಹೀಗಾಗಿ ಅಲ್ಪಪ್ರಮಾಣದಲ್ಲಿ ಶೇಖರಣೆ ಕಮ್ಮಿಯಾಗಿದೆ ಹೊರತಾಗಿ ರಕ್ತದ ಕೊರತೆ ಇಲ್ಲ ಎಂದು ಮಂಜುನಾಥ್ ತಿಳಿಸಿದ್ದಾರೆ.
Key words: no shortage -blood – Blood Bank-KR Hospital -blood donation officer -Manjunath