ಮೈಸೂರು,ಜೂನ್,29,2021(www.justkannada.in): ಈ ತಿಂಗಳು ರಾಜ್ಯಕ್ಕೆ ಹೆಚ್ಚಿನ ಕೋವಿಡ್ ಲಸಿಕೆ ಬರಬೇಕಿತ್ತು. ಆದರೆ ಕೋವಿಡ್ ಲಸಿಕೆ ಬರುವುದು ವಿಳಂಬವಾಗಿದೆ. ದೆಹಲಿಗೆ ತೆರಳಿ ಕೇಂದ್ರ ಸಚಿವರನ್ನ ಭೇಟಿಯಾಗಿ ಹೆಚ್ಚಿನ ಲಸಿಕೆ ನೀಡುವಂತೆ ಮನವಿ ಮಾಡುತ್ತೇನೆ ಎಂದು ಬೆಳಿಗ್ಗೆಯಷ್ಟೇ ಹೇಳಿಕೆ ನೀಡಿದ್ಧ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಇದೀಗ ರಾಜ್ಯದಲ್ಲಿ ವ್ಯಾಕ್ಸಿನ್ ಕೊರತೆಯೇ ಇಲ್ಲ ಎಂದಿದ್ದಾರೆ.
ಈ ಮಧ್ಯೆ ಮೈಸೂರು ಜಿಲ್ಲೆಯಲ್ಲಿ ವ್ಯಾಕ್ಸಿನ್ ಕೊರತೆಯಿಂದಾಗಿ ಸರ್ಕಾರಿ ಲಸಿಕೆ ಕೇಂದ್ರಗಳನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಆದರೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ನಮ್ಮಲ್ಲಿ ವ್ಯಾಕ್ಸಿನ್ ಕೊರತೆ ಇಲ್ಲ ಎಂದು ಹೇಳುತ್ತಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾತನಾಡಿರುವ ಆರೋಗ್ಯ ಸಚಿವ ಸುಧಾಕರ್. ದಿನಕ್ಕೆ ಈಗಲೂ ಎರಡ್ಮೂರು ಲಕ್ಷ ವಾಕ್ಸಿನ್ ಕೊಡುತ್ತಿದ್ದೇವೆ. ಈಗಲು ನಮ್ಮ ಬಳಿ ಐದು ಲಕ್ಷ ವಾಕ್ಸಿನ್ ದಾಸ್ತಾನು ಇದೆ. ರಾಜ್ಯದಲ್ಲಿ ಡ್ರೈ ಎನ್ನುವ ಪರಿಸ್ಥಿತಿಯೇ ಬಂದಿಲ್ಲ. ಕೇಂದ್ರದವರ ಜೊತೆ ನಾವು ಮಾತನಾಡಿದ್ದೇವೆ. ನಾಳೆ ಮತ್ತಷ್ಟು ವಾಕ್ಸಿನ್ ರಾಜ್ಯಕ್ಕೆ ಬರಲಿದೆ. ದೇಶದಲ್ಲೇ ಅತೀ ಹೆಚ್ಚು ವಾಕ್ಸಿನ್ ಕೊಟ್ಟ ರಾಜ್ಯ ನಮ್ಮದು ಎಂದರು.
ರಾಜ್ಯದಲ್ಲಿ ಒಟ್ಟು ನಗರ ಪ್ರದೇಶದಲ್ಲಿ 20 ಕೊರೊನಾ ಹಾಟ್ ಸ್ಪಾಟ್ ಗುರುತಿಸಿದ್ದೇವೆ. ಗ್ರಾಮೀಣ ಪ್ರದೇಶದಲ್ಲಿ 20 ಕೊರೊನಾ ಹಾಟ್ಸ್ಪಾಟ್. ಮೈಸೂರಿನಲ್ಲಿ ಒಟ್ಟು 5 ಕೊರೊನಾ ಹಾಟ್ ಸ್ಪಾಟ್ ಇದೆ. ಪಿರಿಯಾಪಟ್ಟಣ ಬನ್ನೂರು ಹನಗೋಡು ಸೀಹಳ್ಳಿ ಹಾಗೂ ಆಸ್ಪತ್ರೆ ಕಾವಲು ಹಾಟ್ ಸ್ಪಾಟ್ ಆಗಿದೆ. ಇದನ್ನ ಕಂಟೋನ್ಮೆಂಟ್ ಜೋನ್ ಮಾಡಲು ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ. ಮೈಸೂರಿನಲ್ಲಿ ಡೆಲ್ಟಾ ಪ್ಲಸ್ ಲ್ಯಾಬ್ ಆರಂಭಕ್ಕೆ ಸಿದ್ದತೆ ಮಾಡುತ್ತಿದ್ದೇವೆ ಎಂದು ಸಚಿವ ಸುಧಾಕರ್ ತಿಳಿಸಿದರು.
ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಸುಧಾಕರ್, ಮುಖ್ಯಮಂತ್ರಿಯೇ ಹೇಳಿದ ಮೇಲೆ ಇದರಲ್ಲಿ ನನ್ನ ವೈಯಕ್ತಿಕ ಅಭಿಪ್ರಾಯ ಏನಿಲ್ಲ ಎಂದು ಹೇಳುವ ಮೂಲಕ ಮಾಧ್ಯಮದವರ ಪ್ರಶ್ನೆಗೆ ವಿವರಣೆ ನೀಡಲು ಸಚಿವ ಸುಧಾಕರ್ ನಿರಾಕರಿಸಿದರು.
Key words: no shortage –covid-vaccines – state-Health Minister -Dr Sudhakar-mysore