ಧಾರವಾಡ, ಆಗಸ್ಟ್, 18, 2020(www.justkannada.in): ರಾಜ್ಯದಲ್ಲಿ ಯೂರಿಯ ಸೇರಿದಂತೆ ಯಾವುದೇ ರಸಗೊಬ್ಬರದ ಕೊರತೆಯಿಲ್ಲ. ಕಳೆದ ಸಾಲಿಗಿಂತ ಈ ವರ್ಷ 25% ರಷ್ಟು ಬಿತ್ತನೆ ಹೆಚ್ಚಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ ಸಚಿವ ಬಿ.ಸಿ ಪಾಟೀಲ್, ಈ ತಿಂಗಳೊಳಗೆ 60 ಸಾವಿರ ಮೆಟ್ರಿಕ್ ಟನ್ ಯೂರಿಯ ಪೂರೈಕೆಯಾಗುತ್ತಿದ್ದು, ಈ ವಾರ 37ಸಾವಿರ ಟನ್ ಯೂರಿಯ ಸರಬರಾಜು ಮಾಡಲಾಗುವುದು. ಅಗತ್ಯಕ್ಕಿಂತ ಹೆಚ್ಚು ಯಾವುದೇ ರಸಾಯಾನಿಕವನ್ನು ರೈತರು ಬಳಸಬಾರದು ಎಂದು ಹೇಳಿದರು.
ಸಾಧ್ಯವಾದಷ್ಟು ರಸಗೊಬ್ಬರಗಳನ್ನು ಅನಗತ್ಯವಾಗಿ ಬಳಸುವುದನ್ನು ಬಳಕೆ ಕಡಿಮೆ ಮಾಡಿ. ಅನ್ನ ನೀಡುವ ಭೂಮಿ ವಿಷಕಾರಿಯಾಗುವುದನ್ನು ತಪ್ಪಿಸಿ ಎಂದು ಸಚಿವ ಬಿ.ಸಿ ಪಾಟೀಲ್ ಮನವಿ ಮಾಡಿದ್ದಾರೆ.
Key words: no shortage –fertilizer-Agriculture Minister- B.C. Patil