ಮೈಸೂರು,ಏಪ್ರಿಲ್,20,2021(www.justkannada.in) ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೋನಾ ನಿಯಂತ್ರಣಕ್ಕೆ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಿದ್ದು ಈ ಮಧ್ಯೆ ಮೈಸೂರಿನಲ್ಲಿ ಆಕ್ಸಿಜನ್ ಮತ್ತು ಐಸಿಯು ಬೆಡ್ ಗಳಿಗೆ ಕೊರತೆ ಇಲ್ಲ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.
ಮೈಸೂರಿನಲ್ಲಿ ಕೊರೊನಾ ಪ್ರಕರಣ ಹೆಚ್ಚಾದ ಹಿನ್ನೆಲೆ. ಬೆಡ್ ಕೊರತೆ ನೀಗಿಸಲು ಜಿಲ್ಲಾಡಳಿತ ಹರಸಾಹಸ ಪಡುತ್ತಿದೆ ಎನ್ನಲಾಗಿದೆ. ಮೈಸೂರಿನಲ್ಲಿ 1200ರಷ್ಟು ಬೆಡ್ ಗಳು ಕೋವಿಡ್ ಗೆ ಮೀಸಲಿಡಲಾಗಿದೆ ಖಾಸಗಿ ಆಸ್ಪತ್ರೆಯಲ್ಲಿ 92 ಐಸಿಯು, 62 ವೆಂಟಿಲೇಟರ್, ಸರ್ಕಾರಿ ಆಸ್ಪತ್ರೆಯಲ್ಲಿ 28 ಐಸಿಯು, 200 ಆಕ್ಸಿಜನ್ ಬೆಡ್ ಗಳು ಲಭ್ಯವಿದೆ
ಇದಷ್ಟೆ ಅಲ್ಲದೆ ಪ್ರತಿ ತಾಲೂಕು ಕೇಂದ್ರದಲ್ಲಿ 50 ಬೆಡ್ ಗಳ ವ್ಯವಸ್ಥೆ ಮಾಡಲಾಗಿದ್ದು, ಹೊಸದಾಗಿ ಟ್ರಾಮಾ ಸೆಂಟರ್ ನಲ್ಲಿ 200 ಬೆಡ್ ಗಳ ವ್ಯವಸ್ಥೆ ಮಾಡಲಾಗಿದೆ ಮುಂದಿನ ಪರಿಸ್ಥಿತಿ ನೋಡಿಕೊಂಡು ಮತ್ತಷ್ಟು ಬೆಡ್ ಗಳ ವ್ಯವಸ್ಥೆಗೆ ಜಿಲ್ಲಾಡಳಿತ ಸಿದ್ದತೆ ನಡೆಸಿದೆ ಎನ್ನಲಾಗಿದೆ.
ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿರುವ ಮೈಸೂರು ಡಿಸಿ ರೋಹಿಣಿ ಸಿಂಧೂರಿ, ಸದ್ಯಕ್ಕೆ 1500 ಬೆಡ್ ಗಳು ಆಲ್ ರೆಡಿ ಇದೆ. ಐಸಿಯು ಬೆಡ್ ಗಳು ಸಹ ಯಾವುದೇ ಕೊರತೆ ಇಲ್ಲ. ಮೈಸೂರಿನಲ್ಲಿ ಆಕ್ಸಿಜನ್ ಕೊರತೆಯೂ ಇಲ್ಲ. ಆದರೂ ಡೆತ್ ಯಾಕೆ ಆಗ್ತಿದೆ ಎಂಬುದು ಗೊತ್ತಾಗ್ತಿಲ್ಲ. ಆದರೆ ಬೆಂಗಳೂರು ಸೇರಿ ಹೊರ ಜಿಲ್ಲೆಯ ರೋಗಿಗಳು ಬರ್ತಿದ್ದಾರೆ. ಲಾಸ್ಟ್ ಮೂವ್ಮೆಂಟ್ ವೇಳೆ ಚಿಕಿತ್ಸೆ ಬರುವವರ ಸಾವಾಗುತ್ತಿದೆ ಎಂದು ಹೇಳಿದರು.
ಜನರು ಮೊದಲು ಕರೋನಾ ತಪಾಸಣೆ ಆದ ಬಳಿಕ ಸಪರೇಟ್ ಇರಬೇಕು. ಜನರಿಗೆ ಮೊದಲು ಈ ಅರಿವು ಮೂಡಬೇಕು. ಹೊರಗಿನಿಂದ ಬರುವವರಿಗೆ ಮೈಸೂರಿಗೆ ಬರಬೇಡಿ ಎನ್ನಲು ಸಾಧ್ಯವಿಲ್ಲ. ಆದರೆ ಅವರು ಹೆಚ್ಚಾಗಿ ಬಂದರೆ ಪ್ರೆಶರ್ ಖಂಡಿತ ಇದ್ದೆ ಇರುತ್ತೆ. ಬೆಂಗಳೂರಿನಲ್ಲಿ ಬೆಡ್ ಕೊರತೆ ಇರುವವರು ಮೈಸೂರಿಗೆ ಬರ್ತಿದ್ದಾರೆ. ಅದರಲ್ಲೂ ಇಲ್ಲಿ ಸಂಬಂಧಿಕರು ಇರುವವರು ಸಹ ಮೈಸೂರಿಗೆ ಬರ್ತಿದ್ದಾರೆ. ಸದ್ಯಕ್ಕೆ ಐಸಿಯು ಘಟಕ ಕೆ.ಆರ್ ಆಸ್ಪತ್ರೆಯಲ್ಲಿ ಫುಲ್ ಆಗಿದೆ. ಖಾಸಗಿ ಆಸ್ಪತ್ರೆ ಜೊತೆ ಈಗಾಗಲೇ ಮಾತುಕತೆ ನಡೆಸಲಾಗಿದೆ. ಶೇ.50ರಷ್ಟು ಬೆಡ್ ವ್ಯವಸ್ಥೆಗೆ ಸೂಚಿಸಲಾಗಿದೆ. ಸದ್ಯಕ್ಕೆ ಬೆಡ್ ಸಮಸ್ಯೆ ಮೈಸೂರಲ್ಲಿ ಇಲ್ಲ. ಸಡನ್ ಆಗಿ ಸ್ಪೈಕ್ ಆದರೆ ಮಾತ್ರ ಆ ಸಮಸ್ಯೆ ಉಂಟಾಗಲಿದೆ. ಸದ್ಯಕ್ಕೆ ಎಲ್ಲ ರೀತಿಯ ಕ್ರಮಕ್ಕೆ ಜಿಲ್ಲಾಡಳಿತ ಕೂಡ ಮುಂದಾಗಿದೆ ಎಂದು ಡಿಸಿ ರೋಹಿಣಿ ಸಿಂಧೂರಿ ಹೇಳಿದ್ದಾರೆ.
Key words: no shortage – oxygen –ICU- beds – Mysore-DC Rohini Sindhuri.