ನವದೆಹಲಿ,ಫೆ,1,2020(www.justkannada.in) ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಮಂಡಿಸುತ್ತಿರುವ ಕೇಂದ್ರ ಬಜೆಟ್ ನಲ್ಲಿ ತೆರಿಗೆದಾರರಿಗೆ ಸಿಹಿಸುದ್ದಿ ಸಿಕ್ಕಿದೆ.
5 ಲಕ್ಷದವರೆಗೆ ತೆರಿಗೆ ವಿನಾಯಿತಿ ಇದೆ. 5 ರಿಂದ 7.5 ಲಕ್ಷ ಆದಾಯಕ್ಕೆ ಶೇ.10 ರಷ್ಟು ತೆರಿಗೆ, 7.5 ಲಕ್ಷದಿಂದ 10 ಲಕ್ಷ.ರೂ ವರೆಗೆ.15ರಷ್ಟು ತೆರಿಗೆ, 10 ರಿಂದ 12.5 ಲಕ್ಷ ಆದಾಯಕ್ಕೆ ಶೇ.20 ರಷ್ಟು ತೆರಿಗೆ, 12.5 ರಿಂದ 15 ಲಕ್ಷ ಆದಾಯಕ್ಕೆ ಶೆ.25ರಷ್ಟು ತೆರಿಗೆ ಕಟ್ಟಬೇಕಿದೆ. 15 ಲಕ್ಷಕ್ಕಿಂತಲೂ ಮೇಲ್ಪಟ್ಟ ವಾರ್ಷಿಕ ಆದಾಯಕ್ಕೆ 30% ತೆರಿಗೆ ಕಟ್ಟಬೇಕಿದೆ ಎಂದು ಬಜೆಟ್ ನಲ್ಲಿ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
2020-21ರಲ್ಲಿ 22.66 ಲಕ್ಷ ಕೋಟಿ ರೂಪಾಯಿಗಳ ತೆರಿಗೆ ಸಂಗ್ರಹ ಗುರಿ ಹೊಂದಲಾಗಿದೆ. 2020-21ರಲ್ಲಿ ಅಂದಾಜು ವೆಚ್ಚ 30.42 ಲಕ್ಷ ಕೋಟಿ ರೂ ಇದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
Key words: no tax – income- up to Rs 2.5 lakh – taxpayers – budget.