ನವದೆಹಲಿ, ಜನವರಿ 04, 2019 (www.justkannada.in): ಮಲೇಷಿಯಾ ಪ್ರವಾಸ ಕೈಗೊಳ್ಳಬೇಕು ಎಂದುಕೊಂಡಿರುವವರಿಗೆ ಗುಡ್‌ನ್ಯೂಸ್ ಇದೆ.
ಮಲೇಷಿಯಾ ಪ್ರವಾಸ ಕೈಗೊಳ್ಳುವ ಕನಸು ಸುಲಭವಾಗಿ ಈಡೇರಲಿದೆ. ಇದಕ್ಕೆ ಕಾರಣ ಮಲೇಷಿಯಾಗೆ ತೆರಳಲು ಪಾಸ್‌ಪೋರ್ಟ್ ಇದ್ದರಷ್ಟೇ ಸಾಕು ವೀಸಾ ಬೇಕಾಗಿಲ್ಲ. ಮಲೇಷಿಯಾ ಸರ್ಕಾರವು ಭಾರತೀಯ ಪ್ರಜೆಗಳಿಗೆ ಸುವರ್ಣಾವಕಾಶ ನೀಡಿದೆ.
ವೀಸಾ ರಹಿತವಾಗಿ 15 ದಿನಗಳ ಕಾಲ ಮಲೇಷಿಯಾವನ್ನು ಸುತ್ತಾಡಬಹುದು. ಭಾರತೀಯ ಮತ್ತು ಚೀನಾ ಪ್ರಜೆಗಳಿಗೆ ಈ ವೀಸಾ ರಿಯಾಯಿತಿ ನೀಡಲಾಗಿದೆ. ಮಲೇಷಿಯಾ ಪ್ರವಾಸ ಕೈಗೊಳ್ಳುವವರು ವಿದ್ಯುನ್ಮಾನ ಪ್ರವಾಸ ನೋಂದಣಿ ಹಾಗೂ ಮಾಹಿತಿ ವ್ಯವಸ್ಥೆಯಲ್ಲಿ (eNTRI) ನಿಮ್ಮ ಹೆಸರನ್ನು ನೋಂದಾಯಿಸಬೇಕು.
ಒಂದು ಬಾರಿ ನೋಂದಣಿಯಾದರೆ ಮೂರು ತಿಂಗಳೊಳಗೆ ಯಾವಾಗ ಬೇಕಾದರೂ ಮಲೇಷಿಯಾ ಪ್ರವಾಸ ಕೈಗೊಳ್ಳಬಹುದು.