ಮೈಸೂರು,ಸೆಪ್ಟಂಬರ್,7,2021(www.justkannada.in): ಮೈಸೂರಿನ ಎಚ್.ಡಿ.ಕೋಟೆ ಭಾಗದಲ್ಲಿ ನಿಫಾ ವೈರಸ್ ಆತಂಕ ಇಲ್ಲ ಎಂದು ಎಚ್.ಡಿ.ಕೋಟೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ ರವಿಕುಮಾರ್ ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್ , ಕೇರಳದ ಮತ್ತೊಂದು ಭಾಗದಲ್ಲಿ ನಿಫಾ ಸಮಸ್ಯೆ ಇದೆ ಎಂದು ಗೊತ್ತಾಗಿದೆ. ಆದರೆ ನಮ್ಮ ಕೇರಳ ಮಾರ್ಗವೇ ಬೇರೆ ಇದೆ. ನಮ್ಮದು ವೈನಾಡು ಭಾಗವಾಗಿರುವ ಕಾರಣ ಇಲ್ಲಿ ಸಮಸ್ಯೆ ಇಲ್ಲ. ಆದರು ಕೂಡ ನಾವು ಮುಂಜಾಗ್ರತಾ ಕ್ರಮ ವಹಿಸಿದ್ದೇವೆ. ಪ್ರತಿದಿನವೂ ಗಡಿಯಲ್ಲಿ ತಪಾಸಣೆ ಆಗುತ್ತಿದೆ.
ಕೋವಿಡ್ ನೆಗೆಟಿವ್ ವರದಿ ಫೊರ್ಜರಿ ಮಾಡಿದವರ ಬಂಧನ ಸಹ ಆಗಿದೆ. ಅನಗತ್ಯವಾಗಿ ಯಾರು ಕೂಡ ನಮ್ಮ ತಪಾಸಣೆ ಇಲ್ಲದೆ ರಾಜ್ಯಕ್ಕೆ ಎಂಟ್ರಿ ಕೊಡುವಾಗಿಲ್ಲ. ಅಷ್ಟು ಕಟ್ಟುನಿಟ್ಟಾಗಿ ಕ್ರಮ ಕೈಗೊಂಡಿದ್ದೇವೆ. ಸದ್ಯ ನಿಫಾ ಬಗ್ಗೆಯು ಯಾವುದೇ ಆತಂಕ ಬೇಡ. ಈಗಾಗಲೇ ಎಲ್ಲದಕ್ಕೂ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ ಎಂದು ಎಚ್.ಡಿ.ಕೋಟೆ ತಾಲೂಕು ಆರೋಗ್ಯಾಧಿಕಾರಿ ಡಾ ರವಿಕುಮಾರ್ ತಿಳಿಸಿದರು.
Key words: No worries -about -Nifa virus-HD kote- Taluk- Dr. Ravikumar