ಹೊಸ ವೈರಸ್ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ: ಎಲ್ಲರೂ ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ- ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಮನವಿ.

ಬೆಂಗಳೂರು,ನವೆಂಬರ್,27,2021(www.justkannada.in):  ಕೆಲವು ದಿನಗಳಿಂದ ಆಫ್ರಿಕಾ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ಕೊರೊನಾ ಹೊಸ ತಳಿ ಪತ್ತೆಯಾಗಿದೆ. ಕೊರೊನಾ ಡೆಲ್ಟಾ ಎರಡನೇ ಅಲೆಯಲ್ಲಿ ವ್ಯಾಪಕವಾಗಿ ಹರಡಿತ್ತು. ಈಗ ಹೊಸದಾಗಿ ಒಮಿಕ್ರೋನ್ ಕಾಣಿಸಿಕೊಂಡಿದೆ. ಹೊಸ ವೈರಸ್ ಬಗ್ಗೆ ಸದ್ಯಕ್ಕೆ ಆತಂಕ ಪಡುವ ಅಗತ್ಯವಿಲ್ಲ. ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ತಿಳಿಸಿದರು.

ಈ ಕುರಿತು ಮಾತನಾಢಿದ ಸಚಿವ ಸುಧಾಕರ್, ರೂಪಾಂತರಿ ಕೊವಿಡ್ ವೈರಸ್ ಬಹಳ ವೇಗವಾಗಿ ಹರಡುತ್ತಿದೆ. ಸಮುದಾಯಕ್ಕೆ ವೇಗವಾಗಿ ಹರಡುತ್ತದೆ ಎನ್ನುವ ಮಾಹಿತಿ ಇದೆ  ವಿಶ್ವ ಆರೋಗ್ಯ ಸಂಸ್ಥೆಯೇ ಈ ಬಗ್ಗೆ ಮಾಹಿತಿ ನೀಡಿದೆ. ಹೊಸ ವೈರಸ್ ಬಗ್ಗೆ ಸದ್ಯಕ್ಕೆ ಆತಂಕ ಪಡುವ ಅಗತ್ಯವಿಲ್ಲ. ನಿನ್ನೆ ಇದೇ ವಿಚಾರವಾಗಿ ಸಭೆ ಮಾಡಿ ಗೈಡ್ಲೈನ್ಸ್ ರಿಲೀಸ್ ಮಾಡಲಾಗಿದೆ. ರೂಪಾಂತರಿ ವೈರಸ್ ಇರುವ ದೇಶದಿಂದ ಬಂದರೆ ಏರ್​ಪೋರ್ಟ್​ನಲ್ಲೆ ಟೆಸ್ಟ್ ಮಾಡಲಾಗುತ್ತದೆ. ಪಾಸಿಟಿವ್ ಬಂದರೆ ಪ್ರತ್ಯೇಕವಾಗಿ ಇಡಲಾಗುತ್ತದೆ. ಒಂದು ವಾರದ ಬಳಿಕ ಮತ್ತೊಂದು ಟೆಸ್ಟ್ ಮಾಡುತ್ತೇವೆ ಎಂದು  ಹೇಳಿದರು.

45 ಲಕ್ಷ ಜನ ಇನ್ನೂ 2ನೇ ಡೋಸ್ ಲಸಿಕೆಯನ್ನು ಪಡೆದಿಲ್ಲ. ಅವಧಿ ಮುಗಿದಿದ್ದರೂ ಕೆಲವರು ಲಸಿಕೆಯನ್ನು ಪಡೆದಿಲ್ಲ. ಉದಾಸೀನ ಮಾಡದೆ ಕೊವಿಡ್ ಲಸಿಕೆಯನ್ನು ಪಡೆಯಬೇಕು. ಉದಾಸೀನ ಮಾಡಿದರೆ ಗಂಭೀರ ಸಮಸ್ಯೆ ಎದುರಿಸಬೇಕಾಗುತ್ತದೆ. ಲಸಿಕೆ ಪಡೆಯದವರು ತಕ್ಷಣವೇ ಪಡೆಯಬೇಕೆಂದು ಸಚಿವ ಸುಧಾಕರ್ ಮನವಿ ಮಾಡಿದರು.

ರೂಪಾಂತರಿ ವೈರಸ್ ಬರುತ್ತಿರುವ ಹಿನ್ನೆಲೆ ಎಚ್ಚೆತ್ತುಕೊಳ್ಳಬೇಕು. ನಾವು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚು ಲಸಿಕೆ ನೀಡಿದ್ದೇವೆ. ಎಲ್ಲರೂ ಒಟ್ಟಾಗಿ ಕೊರೊನಾ ಸೋಂಕು ಸೋಲಿಸಬೇಕಾಗಿದೆ. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದು ಅಂತ ತಿಳಿಸಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವುದೇ ಔಷಧ ಕೊರತೆ ಇರಲ್ಲ. ಸೋಮವಾರದಿಂದ ಕೊರತೆ ಆಗದಂತೆ ನೋಡಿಕೊಳ್ಳುತ್ತೇವೆ. ಎಲ್ಲ ಔಷಧ ಪೂರೈಕೆ ಮಾಡುವುದಕ್ಕೆ ಕ್ರಮಕೈಗೊಳ್ಳುತ್ತೇವೆ. ಸೋಮವಾರದಿಂದ ಔಷಧಕ್ಕಾಗಿ ಚೀಟಿ ಬರೆದುಕೊಡಲ್ಲ. ಹೊರಗೆ ಔಷಧ ತರುವಂತೆ ಚೀಟಿ ಬರೆದುಕೊಡುವುದಿಲ್ಲ. ಈ ನಿಟ್ಟಿನಲ್ಲಿ ನಾವು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ನುಡಿದರು.

Key words: no worry- about – new virus-Health Minister- Dr K Sudhakar

ENGLISH SUMMARY…

No need to panic about the new COVID variant: All of you take COVID vaccination – Health Minister Dr. K. Sudhakar.
Bengaluru, November 27, 2021 (www.justkannada.in): A new COVID variant found in several countries across the world including South Africa has triggered panic among the people. It can be recalled here that the Delta variant had caused a similar variant during the COVID 2nd wave. Now another variant named ‘Omicron’ has been unearthed. However, the Health Minister of Karnataka Dr. K. Sudhakar has informed that there is no need to panic about it.
Speaking to the reporters today in Bengaluru, Minister Sudhakar informed that he said that the World Health Organization (WHO) itself has informed that the new variant is spreading very swiftly. “However, there is no need to panic about it as of now. We conducted a meeting yesterday regarding this, and we have released new guidelines. Accordingly, any person who comes from countries where the new COVID variant has been found will be tested at the airport and will be quarantined if tested positive. We will again conduct a test after one week,” he informed.
Further, he also said that about 45 lakh people are yet to take the COVID 2nd dose vaccination. “Out of them, many haven’t taken the vaccination though the specified time is over. I request everyone not to neglect and take the vaccination without fail. If you neglect, it may prove dangerous,” he added.
“There is no shortage of medicine in the government hospitals. We are ensuring there is no shortage of medicines in the hospitals from Monday itself. We have also taken all necessary measures to supply the drugs,” he said.
Keywords: Health Minister Dr. K. Sudhakar/ COVID-19 new variant/ South Africa/ no need to panic