ಬೆಂಗಳೂರು,ಜೂ,9,2020(www.justkannada.in): ರಾಜ್ಯಸಭೆ ಚುನಾವಣೆಗೆ ಇವತ್ತು ನಾಮಿನೇಷನ್ ಮಾಡುವುದಕ್ಕೆ ಕೊನೇ ದಿನವಾಗಿತ್ತು. ನಿನ್ನೆ ಕಾಂಗ್ರೆಸ್ ನಿಂದ ಮಲ್ಲಿಕಾರ್ಜುನ ಖರ್ಗೆ ( ೪ ಸೆಟ್ಟ್) ಇಂದು ಜೆಡಿಎಸ್ ನಿಂದ ಹೆಚ್ ಡಿ ದೇವೇಗೌಡರು ನಾಮಿನೇಷನ್ ಮಾಡಿದ್ದಾರೆ ಎಂದು ಚುನಾವಣಾಧಿಕಾರಿ ಎಂ ಕೆ ವಿಶಾಲಾಕ್ಷಿ ತಿಳಿಸಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠೀ ನಡೆಸಿ ಮಾತನಾಡಿದ ಚುನಾವಣಾಧಿಕಾರಿ ಎಂ ಕೆ ವಿಶಾಲಾಕ್ಷಿ, ಬಿಜೆಪಿ ಅಭ್ಯರ್ಥಿಗಳು ಈರಣ್ಣ ಕಡಾಡಿ, ಅಶೋಕ್ ಗಸ್ತಿ ನಾಮಿನೇಷನ್ ಮಾಡಿದ್ದಾರೆ. ನಾಳೆ ಸ್ಕ್ರುಟಿನಿ ಮಾಡಿ ಎಲ್ಲವನ್ನು ತಿಳಿಸುತ್ತೇವೆ. ಚುನಾವಣೆ ವೇಳೆ ಹ್ಯಾಡ್ ಸ್ಯಾನಿಟೈಸರ್ ಮಾಡಿಕೊಂಡು ಬರಬೇಕು. ರೂಮ್ ನಂಬರ್ 106ರಲ್ಲಿ ಚುನಾವಣೆ ನಡೆಯುತ್ತೆ ಎಂದು ತಿಳಿಸಿದರು.
ಮೂರು ಪಕ್ಷದ ನಾಯಕರುಗಳು , ಅದರಲ್ಲು ತುಂಬಾ ಸೀನಿಯರ್ ನಾಯಕರುಗಳು ತುಂಬಾ ಚೆನ್ನಾಗಿ ಕೋಪರೇಟ್ ಮಾಡಿದ್ರು. ತುಂಬಾ ಖುಷಿ ಆಯ್ತು , ಮೂರು ಪಾರ್ಟಿ ಅವರಿಗೆ ತಿಳಿಸಿದ್ವಿ. ಹಿರಿಯ ರಾಜಕೀಯ ನಾಯಕರು ಎಲ್ಲಾ ತುಂಬಾ ಚೆನ್ನಾಗಿ ಸ್ಪಂದಿಸಿದ್ದಾರೆ ಎಂದು ಚುನಾವಣಾಧಿಕಾರಿ ಎಂ.ಕೆ ವಿಶಾಲಾಕ್ಷಿ ಅವರು ತಿಳಿಸಿದರು.
ವಿಧಾನಪರಿಷತ್ ಚುನಾವಣೆ ಬಗ್ಗೆ ಮಾಹಿತಿ ನೀಡಿದ ವಿಶಾಲಾಕ್ಷಿ ಅವರು, ಪರಿಷತ್ ಚುನಾವಣೆ ಇವತ್ತು ನೋಟಿಫಿಕೇಷನ್ ಬಂದಿದೆ. ಏಳು ಪರಿಷತ್ ಸೀಟ್ ಇದೆ. ಜೂನ್ 11 ರಂದು ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಜೂನ್ 18 ರಂದು ನಾಮಿನೇಷನ್ ಗೆ ಕಡೇ ದಿನವಾಗಿದೆ. 19ಕ್ಕೆ ಸ್ಕ್ರುಟಿನಿ ಇದೆ ಎಂದು ತಿಳಿಸಿದರು.
ಚುನಾವಣೆ ದಿನ ಥರ್ಮಲ್ ಸ್ಕ್ರೀನಿಂಗ್ , ಸ್ಕ್ಯಾನಿಂಗ್, ಮಾಡುತ್ತೇವೆ. ಕ್ಯೂ ನಲ್ಲಿ ನಿಲ್ಲಬೇಕು , ನಿಲ್ಲಲು ಆಗದವರಿಗೆ ರೂಮ್ ನಲ್ಲಿ ಕುಳಿತು ನಂತರ ಬರಬಹುದು ಎಂದು ತಿಳಿಸಿದರು.
Key words: Nomination – candidates – Rajya Sabha –elections-Election –officer- MK Vishalakshi