ಬೆಳಗಾವಿ,ಸೆ,26,2019(www.justkannada.in): ನಾಮಪತ್ರ ಸಲ್ಲಿಸುವ ವೇಳೆ ಒಂದು ಲಕ್ಷ ಜನ ಸೇರಿಸಲು ನಿರ್ಧಾರ ಮಾಡಲಾಗಿದೆ. ಜನರಿಗೆ ಹುಮ್ಮಸು ಬಂದಿದೆ ಹೀಗಾಗಿ ಒಂದು ಲಕ್ಷ ಜನ ಸೇರಿಸುತ್ತಿದ್ದೇವೆ ಎಂದು ಅನರ್ಹ ಶಾಸಕರ ರಮೇಶ್ ಜಾರಕಿಹೊಳಿ ತಿಳಿಸಿದರು.
ಗೋಕಾಕ್ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ ಜಾರಕಿಹೊಳಿ ಗೋಕಾಕ್ ನಿವಾಸದಲ್ಲಿ ಮಹತ್ವದ ಸಭೆ ನಡೆಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಸದಸ್ಯರು ಗ್ರಾಮಗಳ ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದರು. ರಮೇಶ ಜಾರಕಿಹೊಳಿ ಸೋಮವಾರ ಶಕ್ತಿ ಪ್ರದರ್ಶನ ಮಾಡಲಿದ್ದಾರೆ. ಸೋಮವಾರ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.
ಸಭೆ ಬಳಿಕ ಮಾತನಾಡಿದ ಮಾಜಿ ಸಚಿವ ರಮೇಶ ಜಾರಕಿಹೊಳಿ, ನ್ಯಾಯಾಲಯದ ಮೇಲೆ ಸಂಪೂರ್ಣವಾಗಿ ನಮಗೆ ವಿಶ್ವಾಸ ಇದೆ. ಕ್ಷೇತ್ರದ ಜನರು ಸ್ವಲ್ಪ ಕನ್ಪೂಸ್ ಇದ್ದಾರೆ ಅದಕ್ಕಾಗಿ ಸಭೆ ನಡೆಸಿದ್ದೇನೆ. ನಾಮಪತ್ರ ಸಲ್ಲಿಕೆಗೆ ಒಂದು ಲಕ್ಷ ಜನರನ್ನ ಸೇರಿಸಲು ನಿರ್ಧರಿಸಿದ್ದೇವೆ. ಜನರಿಗೆ ಹುಮ್ಮಸು ಬಂದಿದೆ ಹೀಗಾಗಿ ಒಂದು ಲಕ್ಷ ಜನ ಸೇರಿಸುತ್ತಿದ್ದೇವೆ ಎಂದರು.
ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ದ ವಾಗ್ದಾಳಿ….
ಇದೇ ವೇಳೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ದ ವಾಗ್ದಾಳಿ ನಡೆಸಿದ ರಮೇಶ್ ಜಾರಕಿಹೊಳಿ, ತುಘಲಕ್ ರಮೇಶ್ ಕುಮಾರ್ ವಾದ ಪ್ರಕಾರ ನಾವು ಚುನಾವಣೆಗೆ ನಿಲ್ಲಲು ಬರುವುದಿಲ್ಲ. ಫೆಬ್ರವರಿ ಯಲ್ಲಿ ವಿಪ್ ಕೊಟ್ಟಿದ್ದಕ್ಕೆ ನಾನು ಅಧಿವೇಶನಕ್ಕೆ ಹಾಜರಾಗಿದ್ದೇನೆ. ಆ ವಿಪ್ ಅಲ್ಲಿಯೇ ಮುಕ್ತಾಯವಾಗಿದೆ. ಮಗಳ ಮದುವೆಗೆ ಹೋಗಿದ್ದಾರೆ ಎಂದು ಸಿದ್ದರಾಮಯ್ಯ ಅವರೇ ಹೇಳಿದ್ದರು. ಆದರೆ ಕುತಂತ್ರದಿಂದ ಹಲವು ಸಾಕ್ಷಿ ಸಿದ್ದಪಡಿಸಿದ್ದಾರೆ. ರಮೇಶ್ ಕುಮಾರ್ ಸಿದ್ದರಾಮಯ್ಯನವರ ಏಜೆಂಟ್ ರಂತೆ ಕೆಲಸ ಮಾಡಿದ್ದಾರೆ ಎಂದು ಕಿಡಿಕಾರಿದರು.
ಲಖನ್ ಜಾರಕಿಹೊಳಿ ಉಪಚುನಾವಣೆಯಲ್ಲಿ ಸುಮ್ಮನೆ ಇರಲಿ.
ಗೋಕಾಕ್ ಕ್ಷೇತ್ರದಲ್ಲಿ ತಮ್ಮ ವಿರುದ್ದ ಸಹೋದರ ಲಖನ್ ಜಾರಕಿಹೊಳಿ ಸ್ಪರ್ಧೆ ಕುರಿತು ಪ್ರತಿಕ್ರಿಯಿಸಿದ ರಮೇಶ್ ಜಾರಕಿಹೊಳಿ, ಲಖನ್ ಜಾರಕಿಹೊಳಿಯನ್ನ ಹಿರಿಯ ಅಣ್ಣನಾಗಿ ನಾನು ಭೇಟಿ ಮಾಡಿ ಸ್ಪರ್ಧೆ ಮಾಡದಂತೆ ಹೇಳುತ್ತೇನೆ. ಲಖನ್ ಸ್ಟ್ಯಾಂಡ್ ತಿಳಿಯುತ್ತಿಲ್ಲ ಇಂದಿಗೂ ಲಖನ್ ಮೇಲೆ ಪ್ರೀತಿ ಇದೆ. ಲಖನ್ ಬಗ್ಗೆ ಇವತ್ತೂ ಪ್ರೀತಿಯ ತಮ್ಮ. ಲಖನ್ ಈಗ ಸುಮ್ಮನೆ ಕುಳಿತುಕೊಳ್ಳಲಿ. ಮುಂದಿನ ಚುನಾವಣೆಯಲ್ಲಿ ನಿಲ್ಲಲ್ಲಿ ಗೆಲ್ಲಿಸುತ್ತೇನೆ. ಲಖನ್ ಉಪಚುನಾವಣೆಯಲ್ಲಿ ಸುಮ್ಮನೆ ಇರಲಿ. ಮುಂದಿನ ಚುನಾವಣೆಯಲ್ಲಿ ಗೋಕಾಕ್ ಕ್ಷೇತ್ರ ಬಿಟ್ಟು ಕೊಡುತ್ತೇನೆ. ನಾನು ಯಮಕನಮರಡಿ ಕ್ಷೇತ್ರದಿಂದ ಸ್ಪರ್ಧಿಸಿ ಸತೀಶ್ ತಾಕತ್ತು ನೋಡುತ್ತೇನೆ ಎಂದು ಹೇಳಿದರು.
Key words: nomination – file – Monday- Ramesh Jarakiholi- gokak