ಬೆಂಗಳೂರು,ಅಕ್ಟೋಬರ್ ,17,2020(www.justkannada.in): ಉತ್ತರ ಕರ್ನಾಟಕದಲ್ಲಿ ಭಾರಿ ಮಳೆಯಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಸರ್ಕಾರ ಸಚಿವರು ನೆರವಿಗೆ ಧಾವಿಸಿಲ್ಲ. ಕೆಲಸ ಮಾಡಲು ಆಗದಿದ್ರೆ ಮನೆಗೆ ಹೋಗಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಿಡಿಕಾರಿದ್ದಾರೆ.
ಉತ್ತರ ಕರ್ನಾಟಕ ನೆರೆ ಪರಿಸ್ಥಿತಿ ಬಗ್ಗೆ ಬೆಂಗಳೂರಿನಲ್ಲಿ ಇಂದು ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಸಚಿವರು ಕೆಲಸ ಮಾಡಲು ಆಗದಿದ್ರೆ ಇನ್ಯಾಕೆ..? ಕೆಲಸ ಮಾಡಲು ಆಗದಿದ್ರೆ ಬಿಟ್ಟು ಹೋಗಲಿ. ಇವರಿಗಾಗಿ ಜನರನ್ನ ಬಲಿ ಕೊಡಲು ಆಗಲ್ಲ. ಪ್ರಧಾನಿ ಮೋದಿ ಯಾವುದೇ ಸಹಾಯವನ್ನ ಮಾಡಿಲ್ಲ. ಬರೀ ಫೋನ್ ಮಾಡಿದ್ದಾರೆ ಅನ್ನೋದು ಬಿಟ್ರೆ ಬೇರೆನೂ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ಆರ್,ಆರ್ ನಗರ ಉಪಚುನಾವಣೆ ಕುರಿತು ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರಿಗೆ ಟಾಂಗ್ ನೀಡಿದ ಡಿ.ಕೆ ಶಿವಕುಮಾರ್, ಮತವನ್ನ ಹಣಕ್ಕೆ ಮಾರಿಕೊಂಡರು ಎಂದು ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ನೋವು ತೋಡಿಕೊಂಡಿದ್ದಾರೆ. ಮುಂದೆ ಏನಾಗುತ್ತದೆ ನೋಡೋಣ ಎಂದು ತಿಳಿಸಿದರು.
Key words: north Karnataka- flood- DK Shivakumar –outrge- against-minister