ವಾಷಿಂಗ್ಟನ್, ಏಪ್ರಿಲ್ 22, 2020 (www.justkannada.in): ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್’ಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆಯೇ? ಇಂತಹದೊಂದು ಸುದ್ದಿಗಳು ಬಿತ್ತರಗೊಳ್ಳುತ್ತಿವೆ.
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಕಳೆದ ಕೆಲ ದಿನಗಳಿಂದ ಎಲ್ಲೂ ಬಹಿರಂಗವಾಗಿ ಕಾಣಿಸಿಕೊಳ್ಳದೇ ಇರುವುದಕ್ಕೆ ಆತನಿಗೆ ಕೊರೋನಾ ಹಬ್ಬಿರುವುದೇ ಕಾರಣ ಎನ್ನಲಾಗುತ್ತಿದೆ.
ಇಂತಹ ವರದಿಗಳ ನಡುವಲ್ಲೇ ಕಿಮ್ ಜಾಂಗ್ ಉನ್’ಗೆ ಚೀನಾದ ವೈದ್ಯರೊಬ್ಬರಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದಾರೆಂದು ಅಮೆರಿಕಾದ ವರದಿಗಾರರೊಬ್ಬರು ಹೇಳಿದ್ದು, ಇದೀಗ ಈ ಸುದ್ದಿ ಇಂಟರ್ನೆಟ್ ನಲ್ಲಿ ಭಾರೀ ವೈರಲ್ ಆಗುತ್ತಿದೆ.
ಕಿಮ್ ಜಾಂಗ್ ಉನ್’ಗೆ ಹೃದಯ ನಾಳ ಚಿಕಿತ್ಸೆಗಾಗಿ ಚೀನಾದ ವೈದ್ಯರೊಬ್ಬರು ಉತ್ತರ ಕೊರಿಯಾಗೆ ಆಗಮಿಸಿದ್ದರು. ಅವರಿಂಗ ಕಿಮ್’ಗೆ ಕೊರೋನಾ ಸೋಂಕು ತಗುಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಜಾಕ್ ಪೊಸೊಬಿಕ್ ಎಂಬ ಪತ್ರಕರ್ತರೊಬ್ಬರು ವಿವಿಧ ಮೂಲಗಳನ್ನು ಆಧರಿಸಿ ಟ್ವೀಟ್ ಮಾಡಿದ್ದಾರೆ.