ಬೆಂಗಳೂರು,ಆಗಸ್ಟ್.27,2020(www.justkannada.in): ಅನಾಮಧೇಯ ಕಂಪೆನಿ ಹೆಸರಿನಲ್ಲಿ ರಸಗೊಬ್ಬರವಾಗಲಿ ಬಿತ್ತನೆಬೀಜವಾಗಲಿ ಮನೆಬಾಗಿಲಿಗೆ ಬಂದರೆ ಅಥವಾ ಯಾರಾದರೂ ನೀಡಿದರೆ ರೈತರು ಅದನ್ನು ಖರೀದಿಸಬಾರದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ರೈತರಿಗೆ ಎಚ್ಚರಿಕೆ ಕ್ರಮ ವಹಿಸುವಂತೆ ಸೂಚಿಸಿರುವ ಕೃಷಿ ಸಚಿವ ಬಿ.ಸಿ ಪಾಟೀಲ್, ಕೆಲವು ಒಳಸಂಚುಗಳು ಅನಾಮಧೇಯ ಕಂಪೆನಿ ರೈತರ ಮನೆಬಾಗಿಲಿಗೆ ಬಿತ್ತನೆ ಬೀಜ ರಸಗೊಬ್ಬರ ಸರಬರಾಜು ಮಾಡುತ್ತಿರುವುದು ತಮ್ಮ ಗಮನಕ್ಕೆ ಬಂದಿದ್ದು, ಇಲಾಖೆ ಈ ಬಗ್ಗೆ ನಿಗಾ ಹಿಸಿದೆ.ರೈತರಿಗೆ ಅನ್ಯಾಯವಾಗುವಂತಹ ಯಾವುದೇ ಮೋಸವನ್ನಾಗಲೀ ನಕಲಿ ಜಾಲವನ್ನಾಗಲೀ ತಾವು ಎಂದಿಗೂ ಸಹಿಸುವುದಿಲ್ಲ. ಈ ಬಗ್ಗೆ ಸೂಕ್ತ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ರೈತರು ಆದಷ್ಟು ಅಧಿಕೃತ ಕಂಪನಿಗಳ ಇಲಾಖೆ ರೈತಸಂಪರ್ಕ ಕೇಂದ್ರ ಸೂಚಿಸಿದ ಬಿತ್ತನೆ ಬೀಜ ರಾಸಾಯನಿಕ ಗೊಬ್ಬರ ಔಷಧಿಗಳನ್ನೇ ಖರೀದಿಸಿ ಬಳಸಬೇಕು. ಇಂತಹ ಯಾವುದೇ ಅನಾಮಧೇಯ ಪ್ಯಾಕೆಟ್ ಬಂದಲ್ಲಿ ಅಥವಾ ಯಾರಾದರೂ ನೀಡಿದಲ್ಲಿ ಆ ಬಗ್ಗೆ ರೈತರು ಹಾಗೂ ಜನರು ಸಮೀಪದ ರೈತಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆಯನ್ನು ಸಂಪರ್ಕಿಸಿ ಮಾಹಿತಿ ನೀಡಬೇಕೆಂದು ಮನವಿ ಮಾಡಿದರು.
Key words: not -buy –sowing- seed- fertilizer-Agriculture Minister- BC Patel