ಬೆಂಗಳೂರು,ಜು,15,2019(www.justkannada.in): ಳು ಪಕ್ಷದ ಹಿರಿಯ ನಾಯಕರು ಭೇಟಿ ಮಾಡಿದ್ದರು. ನಾಲ್ಕು ಗೋಡೆಯ ಮಧ್ಯೆ ಚರ್ಚೆಯಾಗಿರುವ ವಿಷಯವನ್ನು ಹೇಳಲು ಆಗುವುದಿಲ್ಲ ಎಂದು ಕಾಂಗ್ರೆಸ್ ಅತೃಪ್ತ ಶಾಸಕ ರಾಮಲಿಂಗರೆಡ್ಡಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಮಾತನಾಡಿದ ರಾಮಲಿಂಗರೆಡ್ಡಿ, ಸ್ಪೀಕರ್ ರಮೇಶ್ ಕುಮಾರ್ ಅವರು ಇಂದು ಸಂಜೆ ಹಾಜರಾಗುವಂತೆ ಸೂಚಿಸಿದ್ದಾರೆ. ಹೀಗಾಗಿ ಇಂದು ಸಂಜೆ ಸ್ಪೀಕರ್ ಅವರನ್ನ ಭೇಟಿಯಾಗುತ್ತೇನೆ. ನಾನು ನೀಡಿದ ರಾಜೀನಾಮೆ ಅಂಗೀಕಾರವಾಗಿಲ್ಲ. ನಾನು ಸದನದ ಸದಸ್ಯನಾಗಿದ್ದೇನೆ. ಹೀಗಾಗಿ ನಾನು ಇಂದು ಅಧಿವೇಶನಕ್ಕೆ ಹಾಜರಾಗುತ್ತೇನೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕರ ಮನವೊಲಿಕೆ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಮಲಿಂಗರೆಡ್ಡಿ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಭೇಟಿ ಮಾಡಿದ್ದರು. ನಾಲ್ಕು ಗೋಡೆಯ ಮಧ್ಯೆ ಚರ್ಚೆಯಾಗಿರುವ ವಿಷಯವನ್ನು ಹೇಳಲು ಆಗುತ್ತಾ ಎಂದು ಮಾಧ್ಯಮಗಳಿಗೆ ರಾಮಲಿಂಗರೆಡ್ಡಿ ಪ್ರಶ್ನಿಸಿದರು.
ಸಮ್ಮಿಶ್ರ ಸರ್ಕಾರದ ವಿರುದ್ದ ಅಸಮಾಧಾನಗೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಾಮಲಿಂಗಾರೆಡ್ಡಿ ಅವರ ಮನವೊಲಿಸಲು ದೋಸ್ತಿ ನಾಯಕರು ಭಾರೀ ಕಸರತ್ತು ನಡೆಸುತ್ತಿದ್ದಾರೆ. ರಾಮಲಿಂಗಾರೆಡ್ಡಿ ಅವರ ಮನವೊಲಿಸುವ ಪ್ರಯತ್ನ ನಿರಂತರವಾಗಿ ಮುಂದುವರೆದಿದೆ.
Key words: not say -between -four walls-congress-MLA -Ramalingareddy