ಬೆಂಗಳೂರು,ಮೇ,15,2023(www.justkannada.in): ನಾನು ಯಾವ ನಂಬರ್ ಬಗ್ಗೆಯೂ ಮಾತನಾಡಲ್ಲ. ನನ್ನ ಬಳಿ 135 ಶಾಸಕರು ಇದ್ದಾರೆ. ಇವರೆಲ್ಲರೂ ಕಾಂಗ್ರೆಸ್ ಪಕ್ಷದ ಶಾಸಕರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ ಶಿವಕುಮಾರ್, ನಾವು ಒಂದು ಸಾಲಿನ ನಿರ್ಣಯ ಅಂಗೀಕರಿಸಿದ್ದೇವೆ. ಸಿಎಲ್ಪಿ ಸಭೆಯಲ್ಲಿ ನಿರ್ಣಯ ಅಂಗೀಕರಿಸಿದ್ದೇವೆ. ಯಾವ ಶಾಸಕರು ಏನು ಮಾಡಿದ್ದರೋ ನನಗೆ ಗೊತ್ತಿಲ್ಲ. ನನ್ನ ಬಳಿ 135 ಶಾಸಕರು ಇದ್ದಾರೆ. ಕಾಂಗ್ರೆಸ್ನಲ್ಲಿ ನಾನು ಸೇರಿದಂತೆ 135 ಶಾಸಕರು ಇದ್ದೇವೆ. 135 ಶಾಸಕರನ್ನು ಸೋನಿಯಾ ಗಾಂಧಿಗೆ ಅರ್ಪಿಸಿದ್ದೇವೆ ಎಂದರು.
ಹಾಗೆಯೇ ಸದಾಶಿವನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿ.ಕೆ ಶಿವಕುಮಾರ್, ಇಂದು ನನ್ನ ಹುಟ್ಟುಹಬ್ಬ ಗುರುಗಳನ್ನ ಭೇಟಿಯಾಗಬೇಕು. ನನ್ನ ಖಾಸಗಿ ಕಾರ್ಯಕ್ರಮ ಮುಗಿಸಿ ದೆಹಲಿಗೆ ಹೋಗುತ್ತಿದ್ದೇನೆ . ನಾನು ಯಾರ ನಂಬರ್ ಬಗ್ಗೆ ಮಾತನಾಡಲು ಹೋಗುವುದಿಲ್ಲ . ನನ್ನ ಅಧ್ಯಕ್ಷತೆಯಲ್ಲಿ135 ಸ್ಥಾನ ಗೆದ್ದಿದ್ದೇವೆ. ನಿನ್ನೆ ಸಿಎಲ್ ಪಿ ಸಭೆಯಲ್ಲಿ ಒಂದು ನಿರ್ಣಯ ಅಂಗೀಕರಿಸಲಾಗಿದೆ. ಸಿಎಂ ಆಯ್ಕೆ ಹೈಕಮಾಂಡ್ ಗೆ ಬಿಟ್ಟಿದ್ದು ಎಂದು ನಿರ್ಣಯಿಸಲಾಗಿದೆ. ಇರೋ 135 ಶಾಸಕರು ಕಾಂಗ್ರೆಸ್ ಪಕ್ಷದವರು ಎಂದು ತಿಳಿಸಿದರು.
ಯಾವ ಶಾಸಕರೂ ನನ್ನ ಬಳಿ ಇಲ್ಲ ಸಮ್ಮಿಶ್ರ ಸರ್ಕಾರದ ವೇಳೆ 15ರಿಂದ 16 ಶಾಸಕರು ಪಕ್ಷ ತೊರೆದರು. ಆದರೆ ನಾನು ಯಾವುದಕ್ಕೂ ಹೆದರಲೇ ಇಲ್ಲ. ನಾನು ಒಂಟಿ, ಒಂಟಿಯಾಗೇ ಹೋರಾಡುತ್ತೇನೆ ಎಂದು ಡಿ.ಕೆ ಶಿವಕುಮಾರ್ ಹೇಳಿದರು.
Key words: not talking-DK Shivakumar – 135 MLAs – with- me.