ಬೆಂಗಳೂರು,ಜು,19,2019(www.justkannada.in): ವಿಶ್ವಾಸಮತಯಾಚನೆಗೆ ವಿಪಕ್ಷ ನಾಯಕ ಬಿ.ಎಸ್ ಯಡಿಯೂರಪ್ಪ ಮನವಿ ಮಾಡಿದ ಹಿನ್ನೆಲೆ ಚರ್ಚೆ ಮುಗಿಯುವವರೆಗೂ ಮತಕ್ಕೆ ಹಾಕಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.
ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆ ಪ್ರಸ್ತಾಪದ ಮೇಲೆ ಚರ್ಚೆ ನಡೆಯುತ್ತಿದೆ. ಈ ನಡುವೆ ಮಧ್ಯಾಹ್ನ 1.30ರೊಳಗೆ ವಿಶ್ವಾಸಮತಯಾಚಿಸುವಂತೆ ರಾಜ್ಯಪಾಲರು ಸಿಎಂಗೆ ಸೂಚನೆ ನೀಡಿದ್ದರು. ಆದರೆ ಸಮಯ 1.30 ಆದರೂ ವಿಶ್ವಾಸಮತಕ್ಕೆ ಹಾಕದೆ ಆಡಳಿತ ಪಕ್ಷದ ಸದಸ್ಯರು ಚರ್ಚೆ ಮುಂದುವರೆಸಿದರು. ಇದರಿಂದಾಗಿ ವಿಪಕ್ಷ ನಾಯಕ ಬಿ.ಎಸ್ ಯಡಿಯೂರಪ್ಪ ವಿಶ್ವಾಸ ಮತಕ್ಕೆ ಹಾಕುವಂತೆ ಸ್ಪೀಕರ್ ರಮೇಶ್ ಕುಮಾರ್ ಗೆ ಮನವಿ ಮಾಡಿದರು.
ಬಿಎಸ್ ಯಡಿಯೂರಪ್ಪ ಮನವಿ ಬಗ್ಗೆ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್ , ವಿಶ್ವಾಸಮತ ಹಾಕುವುದಕ್ಕೆ ಒಂದು ಪ್ರಕ್ರಿಯೆ ಇದೆ.. ನಿಮಗೆ ಆತುರ ಇರಬಹುದು ನಮಗೆ ಆತುರವಿಲ್ಲ. ಚರ್ಚೆ ಮಾಡದೆ ಮತಕ್ಕೆ ಹಾಕುವುದಿಲ್ಲ ಎಂದರು. ಬಳಿಕ ವಿಧಾನಸಭಾ ಕಲಾಪ ಮಧ್ಯಾಹ್ನ 3 ಗಂಟೆಗೆ ಮುಂದೂಡಿಕೆ ಮಾಡಿದರು.
Key words: Not voting -until – debate-assembly- Adjournment -Speaker Ramesh Kumar