ಬೆಂಗಳೂರು,ಜನವರಿ,02,2021(www.justkannada.in) : ಕೇಂದ್ರ ಸರ್ಕಾರದಿಂದ 2000 ಮುಖ ಬೆಲೆಯ ನೋಟ್ ಬ್ಯಾನ್ ಆಗಲಿದೆ ಹುಷಾರ್…! ಹೀಗೊಂದು, ಎಚ್ಚರಿಕೆ ನೀಡುತ್ತಾ ಯಾರೂ ಊಹಿಸಿಕೊಳ್ಳದ ದಂಧೆ ನಡೆಸುತ್ತಿದ್ದ ಜಾಲವೊಂದು ಬೆಂಗಳೂರಲ್ಲಿ ಸಿಕ್ಕಿಬಿದ್ದಿದೆ.2000 ರೂಪಾಯಿ ನೋಟಿಗೆ 500 ರೂಪಾಯಿ ನೀಡುವುದು ಈ ದಂಧೆ ಮಾಡುವವರ ಕೆಲಸ. ಒಂದೇ ದಿನದಲ್ಲಿ 2000 ಮುಖಬೆಲೆಯ ಸುಮಾರು ಮೂರು ಕೋಟಿ ಹಣವನ್ನು 500 ರೂಪಾಯಿಗೆ ಎಕ್ಸ್ ಚೇಂಜ್ ಮಾಡುತ್ತಿದ್ದರು. ಇಷ್ಟೆ ಅಲ್ಲ ಇದಕ್ಕಾಗಿ ದಂಧೆಕೋರರು ಬರೋಬ್ಬರಿ 80 ಲಕ್ಷ ಕಮಿಷನ್ ಪಡೆಯುತ್ತಿದ್ದರಂತೆ! ನೋಟ್ ಬ್ಯಾನ್ ಆಗುತ್ತದೆ ಎಂದು ಬೆದರಿಸಿ ಇವರು ಹಣ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಈ ದಂಧೆ ಕುರಿತಂತೆ ಪಬ್ ಮ್ಯಾನೇಜರ್ ಒಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮ್ಯಾನೇಜರ್ ಮಾಹಿತಿ ಆಧರಿಸಿ ಮಫ್ತಿಯಲ್ಲಿ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರು. ಮಾಹಿತಿ ನೀಡಿದ ಪಬ್ ಮ್ಯಾನೇಜರ್ ಅವರನ್ನು ಪೊಲೀಸರು ಹಿಂಬಾಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರ ಮೊಬೈಲ್ ನಲ್ಲಿ ಕಂತೆ ಕಂತೆ ನೋಟುಗಳ ವಿಡಿಯೋ ಪತ್ತೆಯಾಗಿದೆ. ಪ್ರತಿ ವಿಡಿಯೋದಲ್ಲೂ 2000 ಸಾವಿರ ಮುಖಬೆಲೆಯ ಕೋಟಿ, ಕೋಟಿ ಹಣ ಇತ್ತು. ವಿಡಿಯೋ ಜೊತೆಗೆ ಕೋಡ್ ಕೂಡ ಕಳುಹಿಸಲಾಗುತ್ತಿತ್ತು. ಕೊಡ್ ಸಮೇತ ವಿಡಿಯೋ ಬಂದ ಬಳಿಕ ವ್ಯವಹಾರ ಮಾಡುತ್ತಿದ್ದರು ಎನ್ನುವ ವಿಚಾರ ಬಯಲಿಗೆ ಬಂದಿದೆ.
key words : Note-Ban-Arrest-accused