ಬೆಂಗಳೂರು,ಅಕ್ಟೋಬರ್,31,2023(www.justkannada.in): ರಾಜ್ಯದಲ್ಲಿ ಬಿಜೆಪಿ ನಾಯಕರ ತಂಡದಿಂದ ಬರ ಅಧ್ಯಯನ ಪ್ರವಾಸ ವಿಚಾರಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ಬಿಜೆಪಿ ಬರ ಅಧ್ಯಯನ ಮಾಡಲಿ ತಪ್ಪೇನಿಲ್ಲ. ಕೃಷಿ ಸಚಿವರು ಕಂದಾಯ ಸಚಿವರು ವರದಿ ಕೊಟ್ಟಿದ್ದಾರೆ. ರಾಜ್ಯದಲ್ಲಿ 200ಕ್ಕೂ ಹೆಚ್ಚು ತಾಲ್ಲೂಕುಗಳು ಬರಪೀಡಿತ ಎಂದು ಘೋಷಣೆಯಾಗಿದೆ ನಮ್ಮ ಸಚಿವರ ವರದಿ ಆಧರಿಸಿ ಪರಿಹಾರ ಕೊಡಿಸಲಿ. ಕೇಂದ್ರದಿಂದ ಬಿಜೆಪಿಪಿಯವರೇ ದುಡ್ಡು ಕೊಡಿಸಲಿ. ಕೇಂದ್ರ ಕೂಡ ರಾಜ್ಯದ ನೆರವಿಗೆ ನಿಲ್ಲಬೇಕು ಎಂದು ಹೇಳಿದರು.
ನಾಳೆ ಕನ್ನಡ ರಾಜ್ಯೋತ್ಸವದ ದಿನ ಎಂಇಎಸ್ ನಿಂದ ಕರಾಳ ದಿನಾಚಾರಣೆಗೆ ನಿರ್ಧರಿಸಿರುವ ಕುರಿತು ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ರಾಜ್ಯದ ಹಿತ ಕಾಪಾಡುವುದು ನಮ್ಮ ಕರ್ತವ್ಯ. ಈ ಬಗ್ಗೆ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತದೆ. ನಿನ್ನೆಯೇ ಸಿಎಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದರು.
Key words: nothing -wrong – BJP -studying –drought– DCM -DK Shivakumar.