ನವದೆಹಲಿ,ಡಿಸೆಂಬರ್,2,2024 (www.justkannada.in): ನನಗೆ ನೀಡಿರುವ ಶೋಕಾಸ್ ನೋಟಿಸ್ ನಕಲಿ ಎಂದು ಅನುಮಾನ ಮೂಡಿಸುತ್ತಿದೆ. ವಿಜಯೇಂದ್ರನೇ ನಖಲಿ ನೋಟಿಸ್ ಮಾಡಿಸಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಗುಡುಗಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಯತ್ನಾಳ್, ನನಗೆ ಯಾವುದೇ ಅಧಿಕೃತ ನೋಟಿಸ್ ಬಂದಿಲ್ಲ ನೋಟಿಸ್ ಗೆ ಸರಿಯಾಗಿ ಉತ್ತರ ಕೊಡುತ್ತೇನೆ . ಇದುವರೆಗೆ 3 ನೋಟಿಸ್ ಬಂದಿತ್ತು ಎರಡು ನೋಟಿಸ್ ಗೆ ಉತ್ತರ ಕೊಟ್ಟಿದ್ದೇನೆ ಮತ್ತೊಂದು ನೋಟಿಸ್ ಫೇಕ್ ಅನ್ನಿಸಿತ್ತು ಹಾಗಾಗಿ ಉತ್ತರಿಸಲಿಲ್ಲ. ವಿಜಯೇಂದ್ರನೇ ನಕಲಿ ನೋಟಿಸ್ ಮಾಡಿಸಿದ್ದಾನೆ. ವಿಜಯೇಂದ್ರ ಬಹಳ ಚಲೂ ಇದ್ದಾನೆ. ನೋಟಿಸ್ ಡೂಪ್ಲಿಕೇಟ್ ಇದೆ ಅನ್ನಿಸುತ್ತೆ. ನೋಟಿಸ್ ಶಿಸ್ತು ಸಮಿತಿ ಚೇರ್ ಮನ್ ಅವರದ್ಧೇ ಅನ್ನೋದು ಗ್ಯಾರಂಟಿ ಏನು? ಎಂದು ಪ್ರಶ್ನಿಸಿದರು.
ಡಿಕೆ ಶಿವಕುಮಾರ್ ಜತೆ ವಿಜಯೇಂದ್ರ ಹೊಂದಾಣಿಕೆ ರಾಜಕಾರಣ ನಡೆದಿದೆ. ಬಿಎಸ್ ವೈ ವಿರುದ್ದ ಹಲವು ಪ್ರಕರಣಗಳಿವೆ. ಜಾಮೀನು ರಹಿತ ವಾರೆಂ ಟ್ ಗಳಿವೆ ಸಿದ್ದರಾಮಯ್ಯಗೆ ಬಿಎಸ್ ವೈಗೆ ಅಂಜಬೇಕು ನಾನಲ್ಲ ಎಂದು ಟಾಂಗ್ ಕೊಟ್ಟರು.
Key words: Show cause, notice, fake, MLA, Yatnal