ನವದೆಹಲಿ,ಡಿಸೆಂಬರ್,4,2024 (www.justkannada.in): ಕೇಂದ್ರ ಶಿಸ್ತು ಸಮಿತಿ ನೀಡಿರುವ ಶೋಕಾಸ್ ನೋಟಿಸ್ ಗೆ ಸಮಗ್ರವಾಗಿ ಉತ್ತರ ಬರೆದಿದ್ದೇನೆ. 6 ಪುಟಗಳ ಉತ್ತರ ಸಿದ್ದಪಡಿಸಿದ್ದೇನೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಇಂದು ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಯಡಿಯೂರಪ್ಪ ಕುಟುಂಬ ಟೀಮ್ ಮಾಡಿಕೊಂಡಿದ್ದಾರೆ. ಕುಟುಂಬ ರಾಜಕಾರಣದ ವಿರುದ್ದದ ಹೋರಾಟದಲ್ಲಿ ರಾಜಿ ಇಲ್ಲ. ಬಿಎಸ್ ವೈ ಕುಟುಂಬದ ವಿರುದ್ದ ಹಲವರಿಗೆ ಬೇಸರವಿದೆ ಎಂದರು.
ಪಕ್ಷವನ್ನು ತಾಯಿಯಂತೆ ಭಾವಿಸುವ ನಾಯಕರು ಬೇಕು . ವಿಜಯೇಂದ್ರ ವಿರುದ್ದ ವರಿಷ್ಠರಿಗೆ ದೂರು ಕೊಡುತ್ತೇನೆ. ನಾನು ಬಿಜೆಪಿ ವಿರುದ್ದ ಎಂದೂ ಮಾತನಾಡಿಲ್ಲ. ಭ್ರಷ್ಟಾಚಾರ ರಹಿತ ಕುಟುಂಬವಾದ ರಹಿತ ಪಕ್ಷ ಇರಬೇಕು ಎಂದರು.
Key words: Answer, ready, show cause notice, MLA, Yatnal