ನಾಡಗೀತೆ ಅರ್ಧಕ್ಕೆ ಮೊಟಕು: ಮೈಸೂರು ರೇಸ್ ಕ್ಲಬ್ ಗೆ ನೋಟಿಸ್

ಮೈಸೂರು,ಡಿಸೆಂಬರ್,5,2024 (www.justkannada.in): ಕನ್ನಡ ರಾಜ್ಯೋತ್ಸವ ಆಚರಣೆ ವೇಳೆ ಸಮಯ ಇಲ್ಲ ಎಂದು ನಾಡಗೀತೆಯನ್ನು ಅರ್ಧಕ್ಕೆ ಮೊಟಕುಗೊಳಿಸಿದ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ  ಮೈಸೂರು ರೇಸ್ ಕ್ಲಬ್  ಗೆ ಈ ಕುರಿತು ಲಿಖಿತ ವಿವರಣೆ ನೀಡುವಂತೆ ಕನ್ನಡ ಸಂಸ್ಕೃತಿ ಇಲಾಖೆ ನೋಟಿಸ್ ನೀಡಿದೆ.

ರಾಜ್ಯೋತ್ಸವ ಆಚರಣೆ ವೇಳೆ ಸಮಯ ಇಲ್ಲ ಎಂದು ಖ್ಯಾತ ಸಾಹಿತಿ ಚಿದಾನಂದ ಗೌಡರ ಸಮ್ಮುಖ ನಾಡಗೀತೆಯನ್ನು ಅರ್ಥಕ್ಕೆ ಮೊಟಕು ಗೊಳಿಸಿದ ಮೈಸೂರು ರೇಸ್ ಕ್ಲಬ್ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಿಗೆ ಕನ್ನಡ ಚಳುವಳಿಗಾರ ಅರವಿಂದ  ಶರ್ಮಾ ಎಂಬುವವರು ದೂರು ನೀಡಿದ್ದರು.

ಈ ಕುರಿತು ವಿವರಣೆ ನೀಡುವಂತೆ ಮೈಸೂರು ರೇಸ್ ಕ್ಲಬ್  ಗೆ ನೋಟಿಸ್ ಜಾರಿ ಮಾಡಿರುವ ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಡಿ ಸುದರ್ಶನ್, ಈ ವಿಷಯಕ್ಕೆ ಸಂಬಂಧಪಟ್ಟಂತೆ, ಉಲ್ಲೇಖಿತ ಪತ್ರದಲ್ಲಿ ರಾಜ್ಯ ಸರ್ಕಾರ ಈ ವರ್ಷ ಕರ್ನಾಟಕ ನಾಮಕರಣ ಸುವರ್ಣ ಮಹೋತ್ಸವ ಆಚರಿಸುತ್ತಿದೆ. ಇಂತಹ ಸಂಭ್ರಮದಲ್ಲಿರುವ ನಾಡಿನ ಜನತೆಗೆ ನಾಡಗೀತೆ ಎಂದರೆ ಇನ್ನು ಅತ್ಯಂತ ಹೆಮ್ಮೆ, ರೋಮಾಂಚನ ಆದರೆ ನವೆಂಬರ್ ತಿಂಗಳ ಮೊದಲನೇ ವಾರ ಮೈಸೂರು ರೇಸ್ ಕ್ಲಬ್ ಲಿಮಿಟೆಡ್ (MRC) ನಲ್ಲಿ ರಾಜ್ಯೋತ್ಸವ ಆಚರಣೆ ಮಾಡುತ್ತಿರುವ ಸಂದರ್ಭದಲ್ಲಿ ಸಮಯ ಇಲ್ಲ ಎಂದು ನಾಡಗೀತೆ ಅರ್ಧಕ್ಕೆ ಮೊಟಕುಗೊಳಿಸಿರುವುದು ಖಚಿತ ಮಾಹಿತಿ ನನ್ನ ಗಮನಕ್ಕೆ ಬಂದಿದೆ. ಅದು ಕೂಡ ಹಿರಿಯ ಸಾಹಿತಿ ಪ್ರೊ. ಚಿದಾನಂದಗೌಡರ ಸಮ್ಮುಖ ಅವರಿಗೂ ಈ ಘಟನೆ ಬೇಸರ ತಂದಿರುವ ವಿಷಯವಾಗಿದೆ. ನಾಡಿಗೆ ಅಗೌರವ ತೋರಿರುವ ಇಂತಹ ಸಂಸ್ಥೆಯ ವಿರುದ್ಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಕ್ರಮಕೈಗೊಳ್ಳಬೇಕೆಂದು ಕೋರಿರುತ್ತಾರೆ.

ಆದ್ದರಿಂದ ಮೇಲ್ಕಂಡ ದೂರಿಗೆ ಸಂಬಂಧಿಸಿದಂತೆ ಈ ಪತ್ರ ತಲುಪಿದ ಮೂರು ದಿನಗಳೊಳಗಾಗಿ ಲಿಖಿತ ವಿವರಣೆಯನ್ನು ಈ ಕಚೇರಿಗೆ ನೀಡಬೇಕು ಎಂದು ನೋಟಿಸ್ ನಲ್ಲಿ ಉಲ್ಲೇಖಿಸಿದ್ದಾರೆ.

Key words: Kannada rajyotsava, Notice, Mysore Race Club