ಬೆಂಗಳೂರು, ಜುಲೈ 21, 2019 (www.justkannada.in): ಬಿಜೆಪಿ ಸದನದಲ್ಲಿ ಪ್ರಜಾತಂತ್ರಕ್ಕೆ ಗೌರವ ಕೊಟ್ಟು ನಡೆದುಕೊಳ್ಳುತ್ತಿದೆ. ಆದರೆ ಮೈತ್ರಿ ಪಕ್ಷಗಳಿಗೆ ಬಹುಮತ ಇಲ್ಲದಿದ್ದರೂ ಅಧಿಕಾರಕ್ಕೂ ನಾನಾ ತಂತ್ರಗಳಿಗೆ ಮೊರೆ ಹೋಗಿ ಕಾಲಹರಣ ಮಾಡುತ್ತಿದೆ ಎಂದು ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ದೂರಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ಶಾಸಕರ ಸಂಖ್ಯೆ ನೂರಕ್ಕಿಂತ ಕೆಳಗೆ ಇಳಿಯುತ್ತೆ. ನಮಗೆ ಬಹುಮತ ಇದೆ ಅಂತ ಜಗತ್ತಿಗೇ ಗೊತ್ತು. ಆದರೆ ಅಧಿಕಾರಕ್ಕಾಗಿ ಕಾಗ್ರೆಸ್ ಜೆಡಿಎಸ್ ನವರು ಏನು ಬೇಕಾದ್ರೂ ಮಾಡುತ್ತಾರೆ. ನಾಳೆ ಸುಪ್ರೀಂಕೋರ್ಟ್ ನ್ಯಾಯದ ಪರ ತೀರ್ಪು ಕೊಡುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ನ್ಯಾಯಬದ್ಧವಾಗಿ ನಡೆದುಕೊಂಡಿದೆ. ಈ ಎರಡು ದಿನದಲ್ಲಿ ಅವರ ಸಂಖ್ಯೆ ಇನ್ನಷ್ಟು ಕಮ್ಮಿ ಆಗಿದೆ. ಎರಡಂಕಿಗೆ ಅವರ ಸಂಖ್ಯೆ ಇಳಿದಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಆಗ್ಲೇಬೇಕು. ಬರ, ರೈತರ ಸಮಸ್ಯೆ ಪರಿಹಾರಕ್ಕೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕು. ಅವ್ರು ವಿಶ್ವಾಸ ಮತ ಮಾಡದಿದ್ರೆ ಬಿಜೆಪಿ ಮುಂದೆ ಹಲವು ಮಾರ್ಗಗಳಿವೆ. ಸಂವಿಧಾನಾತ್ಮಕವಾಗಿ ಹೋರಾಟ ಮಾಡ್ತೇವೆ ಎಂದು ಹೇಳಿದ್ದಾರೆ.
ರಾಜ್ಯಪಾಲರು, ರಾಷ್ಟ್ರಪತಿ, ಸುಪ್ರೀಂಕೋರ್ಟ್ ಕಡೆ ಗಮನ ಕೊಡ್ತೇವೆ. ರಾಷ್ಟ್ರಪತಿ ಆಳ್ವಿಕೆ ಇದ್ರೂ ಕುದುರೆ ವ್ಯಾಪಾರ ನಿಲ್ಲಲ್ಲ. ಬಿಜೆಪಿ ಸರ್ಕಾರ ಬಂದ್ರೆ ಮಾತ್ರ ಎಲ್ಲಕ್ಕೂ ಅಂತ್ಯ ಬೀಳುತ್ತೆ. ನಾವು ಮಧ್ಯಂತರ ಚುನಾಚಣೆಯಿಂದ ರಾಜ್ಯದ ಹಿತಾಸಕ್ತಿಗೆ ಧಕ್ಕೆ ಬರುತ್ತೆ ಎಂದು ಹೇಳಿದರು.