“ಎನ್ ಎಸ್ ಎಸ್ ಮೂಲಕ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಿ” : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಸಲಹೆ

ಮೈಸೂರು,ಜನವರಿ,16,2021(www.justkannada.in) : ವಿದ್ಯಾರ್ಥಿಗಳು ಎನ್ ಎಸ್ ಎಸ್ ಕಾರ್ಯ ಚಟುವಟಿಕೆಗಳಲ್ಲಿ ಹೆಚ್ಚಿನದಾಗಿ ತೊಡಗಿಸಿಕೊಂಡು ಪರಿಣಾಮಕಾರಿ ಕರ್ತವ್ಯ ನಿರ್ವಹಿಸಿ. ವಿವಿಯು ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.NSS-Perform-duty-effectively-Chancellor- Prof.G.Hemant Kumar-advised

ಶನಿವಾರ ಮಾನಸಗಂಗೋತ್ರಿ ವಿಜ್ಞಾನಭವನದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಆಯೋಜಿಸಿದ್ದ  “ರಾಷ್ಟ್ರೀಯ ಯುವ ಸಪ್ತಾಹ ಮತ್ತು 2019-20ನೇ ಸಾಲಿನ ಎನ್.ಎಸ್.ಎಸ್.ಪ್ರಶಸ್ತಿ ಪ್ರದಾನ ಸಮಾರಂಭ” ಉದ್ಘಾಟಿಸಿ ಅವರು ಮಾತನಾಡಿದರು.

ಕೊರೊನಾದಂತಹ ಸಂಕಷ್ಟದ ಕಾಲದಲ್ಲಿಯು ಮೈಸೂರು ವಿವಿಯ  ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ವ್ಯಾಪ್ತಿಯ ಕಾಲೇಜುಗಳ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕ, ಸೇವಕಿಯರು ಕೊರೊನಾ ವಾರಿಯರ್ಸ್ ಗಳಾಗಿ ಧೃತಿಗೆಡದೇ ಸಮಾಜ ಸೇವೆ ಮಾಡಿರುವುದು ಶ್ಲಾಘನೀಯ ಎಂದು ಮೆಚ್ಚುಗೆವ್ಯಕ್ತಪಡಿಸಿದರು.

ಕೊರೊನಾದಿಂದಾಗಿ ಎನ್ ಎಸ್ ಎಸ್ ನ ಕಾರ್ಯ ಚಟುವಟಿಕೆಗಳು ವಿಶ್ವವಿದ್ಯಾನಿಲಯದ ಅಧೀನ ಕಾಲೇಜುಗಳಲ್ಲಿ ನಡೆಯದೆ ಇದ್ದರೂ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಾರ್ಗ ಸೂಚಿಯನ್ವಯ ಆನ್ ಲೈನ್ ಮತ್ತು ಆಫ್ ಲೈನ್ ಮೂಲಕ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.

ಆಧುನಿಕ ಕಾಲದಲ್ಲಿ ಭಾರತೀಯತೆಯ ಅಸ್ಮಿತೆಯನ್ನು ಒದಗಿಸಿದ ಪ್ರಮುಖರಲ್ಲಿ ಸ್ವಾಮಿ ವಿವೇಕಾನಂದರು ಒಬ್ಬರಾಗಿದ್ದಾರೆ. ಅವರ ಜನ್ಮ ದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸುತ್ತೇವೆ.  ಸನ್ಯಾಸಿಯೊಬ್ಬರ ಜನ್ಮ ದಿನವನ್ನು ಯುವ ದಿನವನ್ನಾಗಿ ಆಚರಿಸುವುದೇ ಸ್ವಾರಸ್ಯಕರವಾಗಿದೆ ಎಂದರು.

ಯೌವನ ಎಂದರೆ ಶಕ್ತಿಯ ಅಪರಿಮಿತ ಪ್ರವಾಹ. ಆದರೆ, ಸನ್ಯಾಸ ಎನ್ನುವುದು ಇದಕ್ಕೆ ತದ್ವಿರುದ್ಧವಾದ ಸ್ಥಿತಿ. ಶಕ್ತಿಯ ಎಲ್ಲಾ ಮೂಲಗಳನ್ನು ಸಂಯಮದಲ್ಲಿ, ನಿಗ್ರಹದಲ್ಲಿ ಹಿಡಿದುಕೊಳ್ಳುವ ಸಾಧನ ಮಾರ್ಗವೇ ಸನ್ಯಾಸ. ಅಂತಹದ್ದನ್ನು ಸಾಧಿಸಿದವರು ವಿವೇಕಾನಂದರು ಎಂದು ಹೇಳಿದರು.NSS-Perform-duty-effectively-Chancellor- Prof.G.Hemant Kumar-advisedಅನೇಕ ಸ್ವಾತಂತ್ರ್ಯ ಹೋರಾಟಗಾರರು ಸ್ವಾಮಿ ವಿವೇಕಾನಂದರಿಂದ ಪ್ರೇರಣೆ ಪಡೆದವರಾಗಿದ್ದಾರೆ. ಅಂತಹವರಲ್ಲಿ ಮಹಾತ್ಮ ಗಾಂಧೀಜಿ, ಜವಾಹರ ಲಾಲ್ ನೆಹರು, ಸುಭಾಷ್ ಚಂದ್ರ ಬೋಸ್, ಬಾಲ ಗಂಗಾಧರ ತಿಲಕ್ ಪ್ರಮುಖರಾಗಿದ್ದಾರೆ ಎಂದರು.

ಸ್ವಾಮಿ ವಿವೇಕಾನಂದರು ಓರ್ವ ಶ್ರೇಷ್ಠ ವ್ಯಕ್ತಿಯಾಗಿದ್ದು, ಅವರ ಬೋಧನೆಗಳಿಂದಾಗಿ ನಮ್ಮ ದೇಶವಾಸಿಗಳು ಆತ್ಮ ಗೌರವವನ್ನು, ಆತ್ಮ ನಿರ್ಭರತೆಯನ್ನು ಮತ್ತು ತಮ್ಮ ಹಕ್ಕನ್ನು ದೃಢವಾಗಿ ಪ್ರತಿಪಾದಿಸುವ ಧೈರ್ಯವನ್ನು ಪಡೆದುಕೊಂಡರು. ಪಾಶ್ಚಿಮಾತ್ಯರಲ್ಲಿ ಆಧ್ಯಾತ್ಮಿಕತೆಯ ದಾರಿದ್ರ್ಯವಿದೆ. ಆಧ್ಯಾತ್ಮದ ವಿಷಯದಲ್ಲಿ ಭಾರತಕ್ಕೆ ಒಂದು ಜಾಗತಿಕ ಮಟ್ಟದ ಹೊಣೆಯಿದೆ ಎಂದು ಹೇಳಿದ್ದಾರೆ ಎಂದು ಸ್ಮರಿಸಿದರು.

ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಶ್ರೀ ಸ್ವಾಮಿ ಮುಕ್ತಿದಾನಂದಜಿ ಮಹಾರಾಜ್ ಅವರು “ಯುವ ಜನ ಮಾರ್ಗದರ್ಶಿ –ಸ್ವಾಮಿ ವಿವೇಕಾನಂದ” ವಿಷಯ ಕುರಿತು ಮಾತನಾಡಿ, ಮನುಷ್ಯನಿಗೆ ಜ್ಞಾನ ಹೆಚ್ಚಿದಂತೆ ವಿಶ್ವಭ್ರಾತೃತ್ವ ಕಲ್ಪನೆ ಬೆಳೆಯುತ್ತದೆ. ವೈಯಕ್ತಿಕ, ಕುಟುಂಬ, ಸಮುದಾಯ, ಸಮಾಜ ಕೇಂದ್ರದ ಆಚೆಗೆ ರಾಷ್ಟ್ರೀಯ ಭಾವ ಮೂಡುತ್ತದೆ ಎಂದರು.

ಬದುಕು ಕ್ಷಣಿಕವಾಗಿದ್ದು, ಇರುವ ಸಮಯವನ್ನು ಎಷ್ಟು ಸಾಧ್ಯವೋ ಅಷ್ಟು ಅರ್ಥಪೂರ್ಣವಾಗಿಸುವ ನಿಟ್ಟಿನಲ್ಲಿ ಒಳ್ಳೆಯ ಕೆಲಸಕ್ಕೆ ಮುಡಿಪಾಗಿಡಬೇಕು. ನಮಗಾಗಿ ಬದುಕಿದರೆ ನಾವು ಜೀವಂತ ಶವಗಳು ಎಂದು ವಿವೇಕಾನಂದರು ಹೇಳಿದಾರೆ ಎಂದರು.NSS-Perform-duty-effectively-Chancellor- Prof.G.Hemant Kumar-advised

ಕಾರ್ಯಕ್ರಮದಲ್ಲಿ ಎನ್ ಎಸ್ ಎಸ್ ರಾಜ್ಯ ಅನುಷ್ಠಾನ ಅಧಿಕಾರಿ ಡಾ.ಪೂರ್ಣಿಮಾ ಜೋಗಿ, ಕುಲಸಚಿವ ಪ್ರೊ.ಆರ್‌.ಶಿವಪ್ಪ, ಎನ್ ಎಸ್ ಎಸ್ ಸಂಯೋಜನಾಧಿಕಾರಿ ಡಾ.ಬಿ.ಚಂದ್ರಶೇಖರ್ ಇತರರು ಇದ್ದರು.

ENGLISH SUMMARY….

UoM VC suggests students to perform more effectively through NSS
Mysuru, Jan. 16, 2021 (www.justkannada.in): Vice-Chancellor of the University of Mysore, Prof. G. Hemanth Kumar today suggested the students involve more in NSS activities and perform their duties effectively.
He inaugurated the ‘National Youth Week and NSS Award Programme 2019-20’ organised by the National Service Scheme, University of Mysore, in Manasa Gangotri campus today.NSS-Perform-duty-effectively-Chancellor- Prof.G.Hemant Kumar-advised
In his address to the students, he said, “NSS cadets of various colleges in Mysuru, Mandya, Hassan, and Chamarajanagara dared to work as corona warriors during Corona lockdown period, which is very noticeable and appreciable. Though the activities of NSS in the Colleges that come under our University did not happen properly due to the pandemic, they have been conducted through offline and online as per the guidelines of the Govt. of India and Govt. of Karnataka.”
He also recalled the contribution, services, and achievements of Swami Vivekananda towards the development of society.
Keywords: University of Mysore/ Corona pandemic/ National Youth Week/ Prof. G. Hemanth Kumar/ NSS

key words : NSS-Perform-duty-effectively-Chancellor- Prof.G.Hemant Kumar-advised