ಮೈಸೂರು,ಫೆಬ್ರವರಿ,4,2022(www.justkannada.in): ಮೈಸೂರಿನಲ್ಲಿ ಎನ್ ಟಿಎಂ ಎಸ್ ಶಾಲೆ ಸ್ಥಳಾಂತರ ಮಾಡಿದ್ದನ್ನು ವಿರೋಧಿಸಿ ಎನ್ ಟಿಎಂಎಸ್ ಶಾಲೆ ಉಳಿಸಿ ಹೋರಾಟ ಸಮಿತಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಶಾಸಕ ಎಂ ಕೆ ಸೋಮಶೇಖರ್ ನೇತೃತ್ವದಲ್ಲಿ ಶಾಲೆ ಮುಂಭಾಗದ ರಸ್ತೆಯಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಪ್ರಥಮ ಕನ್ನಡ ಶಾಲೆ ಉಳಿಯಲಿ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಕನ್ನಡ ಪರ ಹೋರಾಟಗಾರು, ಸ್ಥಳೀಯ ರೈತ ಮುಖಂಡರು ಸೇರಿ ಹಲವರು ಭಾಗಿಯಾಗಿದ್ದರು.
ಇದೇ ವೇಳೆ ಪ್ರತಿಭಟನೆ ನಡೆಸುತ್ತಿದ್ದ ಎಂಕೆ ಸೋಮಶೇಖರ್ ಇವರ ಜತೆ ಕೆಲ ಹೋರಾಟಗಾರರನ್ನ ಪೊಲೀಸರು ಬಂಧಿಸಿದರು ನಂತರ ಶಾಂತಿಯುತ ಹೋರಾಟಕ್ಕೆ ಅನುವು ಮಾಡಿಕೊಟ್ಟರು.
ಪೋಲಿಸ್ ಬಂದೋಬಸ್ತ್ ನಲ್ಲಿ ಎನ್ ಟಿ ಎಂ ಎಸ್ ಶಾಲಾ ಮಕ್ಕಳಿಗೆ ತರಗತಿ ಆರಂಭ.
ಮಹಾರಾಣಿ ಸರ್ಕಾರಿ ಶಿಕ್ಷಕಿಯರ ತರಬೇತಿ ಸಂಸ್ಥೆ ಕಟ್ಟಡದಲ್ಲಿ ಪೋಲಿಸ್ ಬಂದೂಬಸ್ತ್ ನಲ್ಲಿ ಎನ್ ಟಿ ಎಂ ಎಸ್ ಶಾಲಾ ಮಕ್ಕಳಿಗೆ ತರಗತಿ ಆರಂಭವಾಗಿದ್ದು, ಮಕ್ಕಳಿಗೆ ಡಿಡಿಪಿಐ ರಾಮಚಂದ್ರರಾಜೆ ಅರಸ್ ಸಿಹಿ ವಿತರಿಸಿದರು. ಈ ಕುರಿತು ಮಾತನಾಡಿದ ಅವರು, ಸರ್ಕಾರ ಆದೇಶದಂತೆ ಶಾಲೆ ಸ್ಥಳಾಂತರ ಮಾಡಿದ್ದೇವೆ. ಇದು ಎನ್ ಟಿಎಂ ಎಸ್ ಶಾಲೆಯ ಮೂಲ ಕಟ್ಟಡ. ಮೊದಲು ಶಾಲೆ ಆರಂಭವಾಗಿದ್ದೆ ಇಲ್ಲಿಯೇ ಈಗ ಮತ್ತೆ ಮೂಲ ಸ್ಥಳಕ್ಕೆ ಸ್ಥಳಾಂತರ ಮಾಡಿದ್ದೇವೆ. ಸರ್ಕಾರಿ ಮಹಾರಾಣಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹೆಸರಿನಲ್ಲಿ ನಡೆಯುತ್ತಿದೆ. ಎಲ್ಲಾ ಸುಸಜ್ಜಿತ ವ್ಯವಸ್ಥೆ ಮಾಡಿಕೊಡಲಾಗುವುದು. ಶಿಕ್ಷಣ ಸಚಿವರು ಕೂಡ ಶಾಲೆ ಅಭಿವೃದ್ಧಿ ಕುರಿತು ಯೋಜನೆ ರೂಪಿಸಿ ಸರ್ಕಾರಕ್ಕೆ ಕಳಹಿಸಿಕೊಡುವಂತೆ ಸೂಚಿಸಿದ್ದಾರೆ.. ಎನ್ ಟಿ ಎಂ ಶಾಲೆ ಮುಚ್ಚಿಲ್ಲ. ಮುಂದುವರೆದಿದೆ ಎಂದು ಡಿಡಿಪಿಐ ರಾಮಚಂದ್ರರಾಜೆ ಅರಸ್ ಹೇಳಿದರು.
Key words: NTMS- school- protest-mysore
ENGLISH SUMMARY…
Protest over shifting of NTMS School in Mysuru: Several including a former MLA arrested
Mysuru, February 4, 2022 (www.justkannada.in): Members of the ‘Save NTMS School,’ and Congress activists and leaders today demonstrated against the State Government condemning the shifting of NTMS school in the city.
The protest was held under the leadership of former MLA M.K. Somashekar in front of the school. The police arrested the former MLA and several other protestors. Later they were released and were allowed to stage a peaceful protest.
The classes were conducted at the Maharani Government Teachers’ Training Institute amidst tight police bundobust. DDPI Ramachandra Raje Urs distributed sweets to the students. Speaking on the occasion, he said, “We have shifted the school as per government orders. This is the original building of the NTMS school. It was started here, and it has returned here now. It is functioning under the name Government Maharani Model Higher Primary School. It has all facilities. The Education Minister has informed us that he has prepared a proposal to the government for the overall development of the school. NTMS school is not closed it has continued,” he explained.
Keywords: NTMS school/ shifted/ protest/ DDPI