ನವದೆಹಲಿ,ಡಿಸೆಂಬರ್,19,2020(www.justkannada.in): ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಒಂದು ಕೋಟಿ ಗಡಿ ದಾಟಿದೆ. ಕಳೆದ 24 ಗಂಟೆಯಲ್ಲಿ 25,153 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 10,004,599ಕ್ಕೆ ಏರಿಕೆಯಾಗಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಈ ಕುರಿತು ಮಾಹಿತಿ ನೀಡಿದೆ, ಈ ಮೂಲಕ ಭಾರತ 1 ಕೋಟಿ ಕೊರೊನಾವೈರಸ್ ಪ್ರಕರಣಗಳನ್ನು ದಾಟಿದ ಎರಡನೇ ರಾಷ್ಟ್ರವಾಗಿ ಹೊರಹೊಮ್ಮಿದೆ. ಇಂದು ಬೆಳಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಟ್ವೀಟ್ ಮಾಡಿದ್ದು, ‘ಸಮಗ್ರ ಸರ್ಕಾರ’ ವಿಧಾನದ ಮೂಲಕ, ಹೆಚ್ಚಿನ ಚೇತರಿಕೆಯ ದರ ಮತ್ತು ಕಡಿಮೆ ಸಾವಿನ ದರಗಳನ್ನು ನಿರಂತರವಾಗಿ ಕೇಂದ್ರೀಕರಿಸಿವೆ ಎಂದು ಹೇಳಿದೆ.
ಕಳೆದ 24ಗಂಟೆಗಳಲ್ಲಿ ದೇಶದಲ್ಲಿ 347 ಮಂದಿ ಕೊರೋನಾವೈರಸ್ನಿಂದ ಬಲಿಯಾಗಿದ್ದಾರೆ. ಒಟ್ಟು ಸಾವಿನ ಸಂಖ್ಯೆ 1,45,136ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಇದುವರೆಗೂ ಒಟ್ಟು ಬಿಡುಗಡೆಯಾದವರ ಸಂಖ್ಯೆ 95,50,712ಕ್ಕೆ ಏರಿಕೆಯಾಗಿದೆ. ಜತೆಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 3,08,751ಕ್ಕೆ ತಗ್ಗಿದೆ.
english summary…
Number of Corona cases in India crosses one crore!
New Delhi, Dec. 19, 2020 (www.justkannada.in): The number of corona cases in the country has crossed one crore mark. In the last 24 hours 25,153 new cases have been reported and the number has increased to 10,004,599 with this.
With this India has become the second country in the word with more than one crore corona cases according to the Department of Health and Family Welfare report. In its tweet, the Ministry of Health and Family Welfare has stated that the focus will be on ensuring an increase in the number of cures and a decrease in the number of deaths.
347 people have lost their lives in the last 24 hours due to the pandemic across the country. Thereby the total number of deaths has increased to 1,45,136. The number of patients who have been discharged has increased to 95,50,712, and the number of active cases has come down to 3,08,751.
Keywords: Ministry of Health and Family Welfare/ Corona cases/ one crore
Key words: number – coronavirus -infections -crossing -one crore – country.