ಬೆಂಗಳೂರು, ಸೆಪ್ಟೆಂಬರ್ 8, 2021 (www.justkannada.in): ಬೆಂಗಳೂರು ಮಹಾನಗರ ಹಬ್ಬಗಳ ಮಾಸವನ್ನು ಸ್ವಾಗತಿಸಲು ಆರಂಭಿಸುತ್ತಿರುವಂತೆಯೇ, 90ಕ್ಕಿಂತಲೂ ಕಡಿಮೆಸಂಖ್ಯೆಗೆ ಇಳಿದಿದ್ದಂತಹ ಮೈಕ್ರೊ-ಕಂಟೇನ್ಮೆಂಟ್ ಝೋನ್ಗಳ ಸಂಖ್ಯೆ ಪುನಃ ಏರಿಕೆ ಕಾಣಲು ಅರಂಭಿಸಿದೆ.
ಭಾನುವಾರದAದಿಗೆ ಬಿಬಿಎಂಪಿ, ಬೆಂಗಳೂರು ಮಹಾನಗರದ ವಿವಿಧೆಡೆಗಳಲ್ಲಿ 100 ಮೈಕ್ರೊ-ಕಂಟೇನ್ಮೆಂಟ್ ಝೋನ್ಗಳನ್ನು ಘೋಷಿಸಿದ್ದು, ಜನರು ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವುದನ್ನು ಮರೆಯುತ್ತಿರುವುದರ ಕುರಿತು ಎಚ್ಚರಿಸಿದ್ದಾರೆ. ಈ ಮೂಲಕ ಕೋವಿಡ್ ಸೋಂಕು ಮತ್ತೊಮ್ಮೆ ನಗರದೊಳಗೆ ನುಸುಳುತ್ತಿರುವುದನ್ನು ಸೂಚಿಸಿದ್ದಾರೆ. ಆಗಸ್ಟ್ ೨೭ರಂದು ೯೬ರಷ್ಟಿದ್ದ ಮೈಕ್ರೊ-ಕಂಟೇನ್ಮೆAಟ್ ಝೋನ್ಗಳ ಸಂಖ್ಯೆ ಸೆಪ್ಟೆಂಬರ್ ೧ರ ವೇಳೆಗೆ ೧೦೦ರ ಗಡಿಯನ್ನು ದಾಟಿ, ೧೦೩ನ್ನು ತಲುಪಿತು. ಆದರೆ ಪುನಃ ಭಾನುವಾರ (ಸೆಪ್ಟೆಂಬರ್ ೫) ೧೦೦ ಮೈಕ್ರೊ-ಕಂಟೇನ್ಮೆಂಟ್ ಝೋನ್ಗಳಿವೆ ಎಂದು ಘೋಷಿಣೆಯಾಗುವ ಮೂಲಕ ಸ್ವಲ್ಪ ಇಳಿಕೆ ಕಂಡು ಬಂದಿದೆ. ಈ ಮೈಕ್ರೊ-ಕಂಟೇನ್ಮೆAಟ್ ಝೋನ್ಗಳ ಪೈಕಿ ಸಿಂಹ ಪಾಲು ಮಹದೇವಪುರ ಹಾಗೂ ಪೂರ್ವ ಪ್ರದೇಶದಲ್ಲಿದೆ. ಈ ಪ್ರದೇಶದಲ್ಲಿ ೨೨ ಮೈಕ್ರೊ-ಕಂಟೇನ್ಮೆಂಟ್ ಝೋನ್ಗಳಿದ್ದರೆ, ದಾಸರಹಳ್ಳಿಯಲ್ಲಿ ಒಂದಿದೆ.
ಈ ಸಂಬಂಧ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು, “ಇತ್ತೀಚಿನ ದಿನಗಳಲ್ಲಿ ಕೆಲವು ಕ್ಲಸ್ಟರ್ಗಳ ರಚನೆಯಾಗುತ್ತಿರುವುದನ್ನು ನಾನು ಒಪ್ಪುತ್ತೇನೆ, ಅದರೆ ಅದರ ಜೊತೆಗೆ ಈ ಕ್ಲಸ್ಟರ್ಗಳಲ್ಲಿ ನಿರ್ಬಂಧಗಳನ್ನು ಹೇರಿಕೆ ಮಾಡಿ, ಮುನ್ನೆಚ್ಚರಿಕಾ ಕ್ರಮಗಳನ್ನು ಅತ್ಯಂತ ಕಟ್ಟುನಿಟ್ಟಾಗಿ ಹೇರಿ ಸೋಂಕು ಹರಡಿದಿರುವಂತೆ ಎಲ್ಲಾ ಕ್ರಮಗಳನ್ನು ವಹಿಸಲಾಗುತ್ತಿದೆ,” ಎಂದರು.
ನಗರದ ಮಹದೇವಪುರ ಹಾಗೂ ಪೂರ್ವ ಪ್ರದೇಶಗಳಲ್ಲಿ ಪ್ರತಿ ನಿತ್ಯ ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಒಪ್ಪಿಕೊಂಡ ಅವರು, “ನಮ್ಮ ಅಧಿಕಾರಿಗಳು ಈ ಪ್ರದೇಶಗಳಲ್ಲಿ ಕಟ್ಟುನಿಟ್ಟಾದ ಎಚ್ಚರಿಕೆ ಹಾಗೂ ನಿಗಾವಹಿಸುತ್ತಿದ್ದಾರೆ,” ಎಂದು ವಿವರಿಸಿದರು.
ಮಹದೇವಪುರದಲ್ಲಿ ಮೈಕ್ರೊ-ಕಂಟೇನ್ಮೆಂಟ್ ಝೋನ್ಗಳು ಹಾಗೂ ಹೊಸ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ ಇತರೆ ರಾಜ್ಯಗಳಿಗೆ ಹೋಗಿ ಬರುವವರೇ ಕಾರಣ ಎಂದಿದ್ದಾರೆ. ಅನೇಕ ಐಟಿ ವೃತ್ತಿಪರರು ಮನೆಯಿಂದಲೇ ಕೆಲಸ ಮಾಡುತ್ತಿದ್ದರೂ ಸಹ ಹಲವು ಕಾರಣಗಳಿಂದಾಗಿ ಅನೇಕರು ಬೆಂಗಳೂರಿಗೆ ಬಂದು ಹೋಗುತ್ತಿದ್ದಾರೆ. “ಅವರ ಜೊತೆಗೆ ಪ್ರಯಾಣದ ಚರಿತ್ರೆಯುಳ್ಳ ಕಟ್ಟಡ ನಿರ್ಮಾಣ ಕಾರ್ಮಿಕರು ಹಾಗೂ ವಿದ್ಯಾರ್ಥಿಗಳ ಸಂಖ್ಯೆಯೂ ಈ ಪ್ರದೇಶಗಳಲ್ಲಿ ಹೆಚ್ಚಿದೆ. ಇದೂ ಸಹ ಪ್ರಕರಣಗಳ ಸಂಖ್ಯೆ ಹೆಚ್ಚಾಗಲು ಒಂದು ಕಾರಣ,” ಎಂದು ತಿಳಿಸಿದ್ದಾರೆ.
ಬಿಬಿಎಂಪಿ ಅಧಿಕಾರಿಗಳು ಕಂಟೇನ್ಮೆಂಟ್ ಝೋನ್ಗಳ ಸಂಖ್ಯೆ ಹೆಚ್ಚಾಗುತ್ತಿರುವ ಸಂಗತಿಯನ್ನು ತಳ್ಳಿಹಾಕಿದ್ದಾರೆ. ಆದರೆ ಒಂದು ತಿಂಗಳಿAದ ಪ್ರತಿ ದಿನ ಬೆಂಗಳೂರು ನಗರದಲ್ಲಿ ೩೦೦ ರಿಂದ ೩೫೦ ಪ್ರಕರಣಗಳು ದಾಖಲಾಗುತ್ತಿರುವುದಾಗಿ ತಿಳಿಸಿದ್ದಾರೆ. “ಮೈಕ್ರೊ-ಕಂಟೇನ್ಮೆAಟ್ ಝೋನ್ಗಳ ಸಂಖ್ಯೆಯಲ್ಲಿ ಸ್ವಲ್ಪ ಮಟ್ಟಿಗೆ ಏರಿಳಿತವಿರಬಹುದು,” ಎನ್ನುವುದು ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ರಣದೀಪ್ ಡಿ ಅವರ ಅಭಿಪ್ರಾಯ. “ಪರಿಸ್ಥಿತಿ ಹೌಹಾರುವಂತಿಲ್ಲ. ಆದರೆ ನಾವು ಎಚ್ಚರಿಕೆಯಿಂದಿರಬೇಕು,” ಎಂದರು.
ಬಿಬಿಎAಪಿಯ ಮುಖ್ಯ ಆರೋಗ್ಯಾಧಿಕಾರಿ ಬಿ.ಕೆ. ವಿಜೇಂದ್ರ ಅವರು ಹೇಳುವಂತೆ ಬಹುಪಾಲು ಕಂಟೇನ್ಮೆAಟ್ ಝೋನ್ಗಳಲ್ಲಿ ಐದಕ್ಕಿಂತ ಕಡಿಮೆ ಸಂಖ್ಯೆಯ ಪ್ರಕರಣಗಳಿವೆಯಂತೆ. “ನೆರೆಯ ರಾಜ್ಯಗಳಿಂದ ಬರುವ ಜನರಿಂದಾಗಿ ಕಂಟೇನ್ಮೆAಟ್ ಝೋನ್ಗಳ ಸಂಖ್ಯೆ ಏರಿಳಿತ ಕಂಡು ಬರುತ್ತಿದೆ. ಹೊರಮಾವು ನರ್ಸಿಂಗ್ ಶಾಲೆಯ ಬಳಿಯಿರುವ ಕ್ಲಸ್ಟರ್ ಅಲ್ಲದೆ, ಇತರೆ ಕ್ಲಸ್ಟರ್ಗಳಲ್ಲಿಯೂ ಸಹ ಮೂರರಿಂದ ಐದು ಪ್ರಕರಣಗಳು ಕಂಡು ಬಂದಿವೆ,” ಎಂದು ವಿವರಿಸಿದ್ದಾರೆ.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: number -covid containment zones – reached – 100th border – Bangalore