ಬೆಂಗಳೂರು, ಜುಲೈ 30, 2023 (www.justkannada.in): ದೇಶದಲ್ಲಿ 2018ರಲ್ಲಿ 2,197 ಇದ್ದ ಹುಲಿಗಳ ಸಂಖ್ಯೆಯು 2022ರ ವೇಳೆಗೆ 3,682ಕ್ಕೆ ಏರಿಕೆಯಾಗಿದೆ.
785 ಹುಲಿಗಳನ್ನು ಹೊಂದಿರುವ ಮಧ್ಯಪ್ರದೇಶವು ದೇಶದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯ ಎನಿಸಿದರೆ, ಕರ್ನಾಟಕವು 563 ಹುಲಿಗಳೊಂದಿಗೆ ಎರಡನೇ ಸ್ಥಾನದಲ್ಲೇ ಮುಂದುವರಿದಿದೆ.
ಹೌದು. ಕಳೆದ ನಾಲ್ಕು ವರ್ಷದಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ದೇಶದಲ್ಲಿ ಹುಲಿಗಳ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿದ ಪರಿಣಾಮವಾಗಿ ಈ ಬೆಳವಣಿಗೆ ಆಗಿದೆ.
ಕೇಂದ್ರ ಸರ್ಕಾರವು ಭಾರತದಲ್ಲಿರುವ ಹುಲಿಗಳ ಸಂಖ್ಯೆ ಕುರಿತು ವರದಿ ಬಿಡುಗಡೆ ಮಾಡಿದೆ. 2018ರಿಂದ 2022ರ ಅವಧಿಯಲ್ಲಿ ಹುಲಿಗಳ ಸಂಖ್ಯೆಯು ಶೇ.ಗಣನೀಯವಾಗಿ ಏರಿಕೆಯಾಗಿದೆ. ಅಂದಹಾಗೆ ಭಾರತವು ಜಗತ್ತಿನಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಷ್ಟ್ರವಾಗಿದೆ. ಅಲ್ಲದೆ, ಜಗತ್ತಿನ ಹುಲಿಗಳಲ್ಲಿ ಭಾರತದಲ್ಲೇ ಶೇ.75ರಷ್ಟು ಹುಲಿಗಳಿವೆ.