ವಿದ್ಯಾವಂತ ಮಹಿಳೆಯರ ಸಂಖ್ಯೆ ಹೆಚ್ಚಳವಾದರೂ, ಕೆಲಸಕ್ಕೆ ಸೇರುವ ಮಹಿಳೆಯರ ಸಂಖ್ಯೆ ಕಡಿಮೆ : ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ 

ಮೈಸೂರು,ಮಾರ್ಚ್,16,2021(www.justkannada.in) : ಭಾರತದಲ್ಲಿ ಉನ್ನತ ವ್ಯಾಸಂಗಕ್ಕಾಗಿ ವಿಜ್ಞಾನಕ್ಕೆ ದಾಖಲಾಗುವ ಹೆಣ್ಣುಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದರೂ, ಕೆಲಸಕ್ಕೆ ಸೇರುವ ಮಹಿಳೆಯರ ಸಂಖ್ಯೆ ಕಡಿಮೆ ಪ್ರಮಾಣದಲ್ಲಿರುತ್ತದೆ. ಇದು ಜಾಗತಿಕ ಸಮಸ್ಯೆಯಾಗಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.jkಮಾನಸಗಂಗೋತ್ರಿಯ ವಿಜ್ಞಾನಭವನದಲ್ಲಿ ಮೈಸೂರು ವಿವಿ ಮಹಿಳಾ ಉದ್ಯೋಗಿಗಳ ಸಮುದಾಯ, ಮಹಿಳಾ ಅಧ್ಯಯನ ಕೇಂದ್ರ, ಮಹಿಳಾ ಸಮಸ್ಯೆಗಳನ್ನು ನಿಭಾಯಿಸುವ ವೇದಿಕೆ ಮತ್ತು ಮೈತ್ರಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ 110ನೇ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ವಿಶ್ವ ಸಂಸ್ಥೆಯ ಪ್ರಕಾರ, ಭಾರತದ ಸಂಶೋಧನಾ ಅಭಿವೃದ್ಧಿ ಸಂಸ್ಥೆಗಳಲ್ಲಿ ಒಟ್ಟು 2 ಲಕ್ಷದ 80ಸಾವಿರ ವಿಜ್ಞಾನಿಗಳು, ಎಂಜಿನಿಯರ್ ಗಳು ಮತ್ತು ತಂತ್ರಜ್ಞರಲ್ಲಿ ಮಹಿಳೆಯರು ಕೇವಲ ಶೇಕಡ 14ರಷ್ಟಿದ್ದಾರೆ ಎಂದು ಬೇಸರವ್ಯಕ್ತಪಡಿಸಿದರು.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯು ಪ್ರಪಂಚದಾದ್ಯಂತ ಮಹಿಳೆಯರ ಅದ್ಭುತ ಸಾಧನೆಗಳನ್ನು ಆಚರಿಸಲು ಅನುವು ಮಾಡಿಕೊಡುತ್ತದೆ. ನಮ್ಮಲ್ಲಿ ಕಷ್ಟಪಟ್ಟು ದುಡಿಯುವ ಮಹಿಳೆಯರ ಕೊರತೆಯಿಲ್ಲ. ಆದರೆ, ಕೆಲವು ಕೈಗಾರಿಕೆಗಳಲ್ಲಿ ಪುರುಷರು ವೃತ್ತಿಜೀವನದಲ್ಲಿ ಪ್ರಾಬಲ್ಯ ಮುಂದುವರಿಸುತ್ತಿದ್ದಾರೆ ಎಂದರು.

number-Educated-increased-Reducing-number-women-work-Mysore VV-Chancellor-Prof.G.Hemant Kumar

ಮಹಿಳೆಯರ ಸ್ಥಿತಿಗತಿಗಳನ್ನು ನೋಡಿದಾಗ ಹಾಗೂ ಮಾನವ ಅಭಿವೃದ್ಧಿ ವರದಿಯ ಅಂಶಗಳನ್ನು ಗಮನಿಸಿದಾಗ, ಪ್ರತಿ ವಿಷಯಕ್ಕೂ ಮಹಿಳೆ, ತನ್ನ ಹೋರಾಟದ ಆಯ್ಕೆಯನ್ನು ಮಾಡಿಕೊಳ್ಳುವ ಅನಿವಾರ್ಯತೆ ಎದುರಾಗಿದೆ ಎಂದು ಹೇಳಿದರು.

ಬಡತನ, ಹಸಿವು, ಉದ್ಯೋಗ, ಅಭಿವೃದ್ಧಿ ಹೀಗೆ ಹಲವು ಪ್ರಮುಖ ವಿಷಯಗಳಲ್ಲಿ ಮಹಿಳೆಯರನ್ನು ಸಶಕ್ತಗೊಳಿಸಿ ಅವರನ್ನು ಅಭಿವೃದ್ಧಿಯ ಮುಖ್ಯವಾಹಿನಿಗೆ ಕರೆದೊಯ್ಯುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.

ಹತ್ತು, ಹಲವು ಕ್ಷೇತ್ರಗಳಲ್ಲಿ ಮಹಿಳೆಯರು ತಮ್ಮದೇ ಛಾಪನ್ನು ಮೂಡಿಸಿದ್ದಾರೆ. ಮೂಡಿಸುತ್ತಿದ್ದಾರೆ. ಮಹಿಳೆಯರು ನಾವು ಪುರುಷರಿಗಿಂತ ಕಮ್ಮಿಯೇನಿಲ್ಲ ಎಂಬಂತೆ ಎಲ್ಲಾ ಕ್ಷೇತ್ರದಲ್ಲಿಯೂ ದುಡಿಯುತ್ತಿದ್ದಾರೆ. ಆದುದರಿಂದ ಮಹಿಳೆಯರೂ ಸಹ ಪುರುಷರಷ್ಟೇ ಸಮಾನರು ಎಂಬುದನ್ನು ಅರಿಯಬೇಕಿದೆ ಎಂದು ಸಲಹೆ ನೀಡಿದರು.

ಮೈಸೂರು ವಿವಿ 2020-2021ನೇ ಸಾಲಿನಲ್ಲಿ ಸ್ನಾತಕೋತ್ತರ ಪದವಿಗೆ ಪ್ರವೇಶಾತಿಯನ್ನು ಪಡೆದಿರುವ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಿನದಾಗಿದೆ. ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ, ಸಬಲರಾಗಿ, ಉದ್ಯೋಗವನ್ನು ಹೊಂದಲು ಸಹಕಾರಿಯಾಗಬೇಕಿದೆ ಎಂದು ತಿಳಿಸಿದರು.

 number,Educated,increased,Reducing,number,women,work,Mysore VV,Chancellor,Prof.G.Hemant Kumar

ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಸದಸ್ಯರಾದ ಡಾ.ಚೈತ್ರ ನಾರಾಯಣ್, ವೈ.ಕೆ.ಪವಿತ್ರ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಉದ್ಘಾಟಿಸಿದರು. ಶ್ರೀ ಜಯದೇವ ಆಸ್ಪತ್ರೆ ಮಕ್ಕಳ ಹೃದ್ರೋಗ ಮುಖ್ಯಸ್ಥರಾದ ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ ಅವರು ವಿಶೇಷ ಉಪನ್ಯಾಸ ನೀಡಿದರು. ಕುಲಸಚಿವ ಪ್ರೊ.ಆರ್.ಶಿವಪ್ಪ ಇತರರು ಉಪಸ್ಥಿತರಿದ್ದರು.

ENGLISH SUMMARY….

‘Though number of educated women has increased, number of employed women is low: MoU VC
Mysuru, Mar. 16, 2021 (www.justkannada.in): “Though the number of girls getting higher education in science is increasing, the number of women joining jobs is low. It is a global problem,” opined Prof. G. Hemanth Kumar, Vice-Chancellor, University of Mysore.
He participated in the 110th International Women’s Day Program held at Manasagangotri today. Presiding over the program he informed that according to a survey conducted by the United Nations, while only 2.80 lakh scientists are serving in various Research Development Institutions in India, the percentage of women employees in the engineering and technology sectors is just 14%.
“The number of enrolment of girls seeking higher education in the University of Mysore for the year 2020-2021 is more than boys. They should be supported to complete their education, become self-dependent, and join jobs,” he added.
Syndicate members Dr. Chaitra Narayan and Y.K. Pavitra was felicitated on the occasion.number,Educated,increased,Reducing,number,women,work,Mysore VV,Chancellor,Prof.G.Hemant Kumar
Smt. Rohini Sindhuri, Deputy Commissioner, Mysuru, inaugurated the program. Dr. Vijayalakshmi Balekundri, Head, Child Cardiology Department, Sri Jayadeva Hospital delivered a special lecture. Prof. R. Shivappa, Registrar, University of Mysore, and others were present.
Keywords: University of Mysore/ Prof. G. Hemanth Kumar/ International Women’s Day program/ girls/ higher education

key words : number-Educated-increased-Reducing-number-women-work-Mysore VV-Chancellor-Prof.G.Hemant Kumar