ಮೈಸೂರು, ನವೆಂಬರ್ 29, 2020 (www.justkannada.in): ಆತುರದಲ್ಲಿ ವೀರಶೈವ ಲಿಂಗಾಯತರನ್ನ ಓಬಿಸಿಗೆ ಸೇರಿಸಲು ನಿರ್ಧರಿಸಿದ್ದಾರೆ. ಇದರ ಪರಿಣಾಮವನ್ನು ಬಿಜೆಪಿ ಸರಕಾರ ಎದುರಿಸಲಿದೆ ಎಂದು ಶಾಸಕ ತನ್ವೀರ್ ಸೇಠ್ ಎಚ್ಚರಿಸಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಣ್ಣ ಸಣ್ಣ ಜನಾಂಗದವರ ಅಭಿವೃದ್ಧಿಗೆ ನಿಗಮಗಳ ರಚನೆ ಅಗತ್ಯ ಇದೆ. ಈಗ ಆತುರದಲ್ಲಿ ವೀರಶೈವ ಲಿಂಗಾಯತರನ್ನ ಓಬಿಸಿಗೆ ಸೇರಿಸಲು ನಿರ್ಧರಿಸಿದ್ದಾರೆ. ವೀರಶೈವ ಲಿಂಗಾಯತ ವಿಚಾರದಿಂದ ಕಾಂಗ್ರೆಸ್ಗೆ ಏನಾಯ್ತು ಅಂತ ಗೊತ್ತಲ್ವ..? ಎಂದು ಹೇಳಿದರು.
ಓಬಿಸಿ ಪಟ್ಟಿಗೆ ವೀರಶೈವ ಲಿಂಗಾಯತ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ವೀರಶೈವ ಲಿಂಗಾಯತ ವಿಚಾರಕ್ಕೆ ಕೈ ಹಾಕೋದು ಬೇಡ ಅಂತ ಸಂಪುಟ ಸಭೆಯಲ್ಲಿ ನಾವು ಹೇಳಿದ್ದೆವು. ಆದರೂ ಕೈ ಹಾಕಿದಾಗ ಮುಂದೆ ಏನಾಯ್ತು ಅಂತ ಇಡೀ ರಾಜ್ಯಕ್ಕೆ ಗೊತ್ತಿದೆ. ಆದರೆ ವೀರಶೈವ ಲಿಂಗಾಯತರ ಸೇರ್ಪಡೆಯಿಂದ ಸಣ್ಣ ಪುಟ್ಟ ಜನಾಂಗಕ್ಕೆ ಹಿನ್ನಡೆಯಾಗಲಿದೆ ಎಂದು ತಿಳಿಸಿದರು.
ರೋಷನ್ ಬೇಗ್ ಬಂಧನ ರಾಜಕೀಯ ಪ್ರೇರಿತವಲ್ಲ: ರೋಷನ್ಬೇಗ್ ಬಂಧನ ರಾಜಕೀಯ ಪ್ರೇರಿತವಲ್ಲ. ಐಎಂಎ ಅಕ್ರಮದಲ್ಲಿ ಅವರು ಬಂಧನವಾಗಿದ್ದಾರೆ. ಹೀಗಾಗಿ ಸಿಬಿಐ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸಿಬಿಐ ತನಿಖೆಯಿಂದ ಸತ್ಯಾಸತ್ಯತೆ ಹೊರಬರಲಿದೆ ಎಂದು ಸಕ ತನ್ವಿರ್ ಸೇಠ್ ಪ್ರತಿಕ್ರಿಯೆ ನೀಡಿದರು.