ನಿಮ್ಮ ಅಂಗಡಿಗೆ ಬೀಗ ಜಡಿಯುವ ಮುನ್ನ ಟ್ರೇಡ್ ಲೈಸನ್ಸ್ ಪಡೆದುಕೊಳ್ಳಿ- ಮೈಸೂರು ಪಾಲಿಕೆ ಆಯುಕ್ತರಿಂದ ಎಚ್ಚರಿಕೆ ಸಂದೇಶ…

ಮೈಸೂರು,ಡಿಸೆಂಬರ್,10,2020(www.justkannada.in):  ಪಾಲಿಕೆ ಅಧಿಕಾರಿಗಳು ನಿಮ್ಮ ಅಂಗಡಿಗೆ ಬೀಗ ಜಡಿಯುವ ಮುನ್ನ ಟ್ರೇಡ್ ಲೈಸನ್ಸ್ ಪಡೆದುಕೊಳ್ಳಿ ಎಂದು ವ್ಯಾಪರಸ್ಥರಿಗೆ, ಮಳಿಗೆದಾರರಿಗೆ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗೆಡೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.logo-justkannada-mysore

ಅಂಗಡಿ ಟ್ರೇಡ್ ಲೈಸನ್ಸ್ ಹಾಗೂ ಪರವಾನಗೆ ನವೀಕರಣ ಮಾಡಿಸಿಕೊಳ್ಳುವಂತೆ  ವ್ಯಾಪಾರಸ್ಥರಿಗೆ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಮನವಿ ಮಾಡಿದ್ದಾರೆ. ಮೈಸೂರಿನಲ್ಲಿ 30 ಸಾವಿರಕ್ಕೂ ಹೆಚ್ಚು ಅಂಗಡಿ ಮಳಿಗೆಗಳಿವೆ. ಕೆಲವು ಕಡೆ ಈಗಾಗಲೇ ಉದ್ಯಮ ಪರವಾನಗಿ ಪಡೆಯದ ಅಂಗಡಿಗಳನ್ನ ಮುಚ್ಚಿಸಲಾಗಿದೆ. ನಂತರ ಅವರು ಟ್ರೇಡ್ ಲೈಸನ್ಸ್ ಪಡೆದುಕೊಳ್ಳಲು ಮುಂದಾಗಿದ್ದಾರೆ.ನಾವು ಕ್ರಮಕೈಗೊಳ್ಳುವ ಮುನ್ನ ನೀವೇ ನೇರವಾಗಿ ಬಂದು ಪರವಾನಗಿ ಪಡೆದುಕೊಳ್ಳಿ ಎಂದು ಪಾಲಿಕೆ ಆಯುಕ್ತ ಗುರುದತ್ ಹೆಗಡೆ ತಿಳಿಸಿದ್ದಾರೆ.obtain-trade-license-before-locking-your-store-warning-mysore-city-corporation-commissioner

ಈಗಾಗಲೇ ಲೈಸನ್ಸ್ ಪಡೆದುಕೊಳ್ಳುವಂತೆ ಹಲವು ಬಾರಿ‌ ಮನವಿ ಮಾಡಲಾಗಿದೆ. ಆದರೂ ಕೆಲವು ಮಳಿಗೆದಾರರು  ಲೈಸನ್ಸ್ ಪಡೆದುಕೊಂಡಿಲ್ಲ. ಲೈಸನ್ಸ್ ಪಡೆಯಲು ತೊಡೆಕುಗಳಿದ್ದಲ್ಲಿ ಪತ್ರದ ಮೂಲಕ ನೇರವಾಗಿ ನನ್ನ ಗಮನಕ್ಕೆ ತನ್ನಿ ಎಂದು ಗುರುದತ್ ಹೆಗೆಡೆ ವ್ಯಾಪಾರಸ್ಥರಿಗೆ, ಮಳಿಗೆದಾರರಿಗೆ ಮನವಿ ಮಾಡಿದ್ದಾರೆ.

Key words: Obtain – trade license -before –locking- your store-Warning – Mysore city corporation Commissioner.