ಬೆಂಗಳೂರು, ಆಗಸ್ಟ್ 18, 2021 (www.justkannada.in): ಒಡಿಶಾ ಸರ್ಕಾರ ಇನ್ನು 10 ವರ್ಷಗಳ ಕಾಲ ಹಾಕಿ ತಂಡಕ್ಕೆ ಪ್ರಾಯೋಜಕತ್ವ ವಿಸ್ತರಿಸಲು ನಿರ್ಧರಿಸಿದೆ.
ಟೋಕಿಯೊ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಪುರುಷರ ಹಾಗೂ ಮಹಿಳಾ ಹಾಕಿ ತಂಡಗಳು ಯಶಸ್ಸು ಸಾಧಿಸಿದ ಬೆನ್ನಲ್ಲೇ ಒಡಿಶಾ ಸರ್ಕಾರ ಈ ಘೋಷಣೆ ಮಾಡಿದೆ.
ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಪ್ರಾಯೋಜಕತ್ವದ ಅವಧಿ 2023ರವರೆಗೂ ಇದ್ದು, ಅಲ್ಲಿಂದ 10 ವರ್ಷಗಳ ಕಾಲ ಪ್ರಾಯೋಜಕತ್ವ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
ಹಾಕಿಯಲ್ಲಿ ಗತವೈಭವ ಮರುಕಳಿಸಬೇಕು ಎಂದು ಹಾರೈಸಿರುವ ಪಟ್ನಾಯಕ್, ಎರಡು ತಂಡಗಳಿಗೂ ಭರ್ಜರಿ ಸ್ವಾಗತ ನೀಡಿದ್ದಾರೆ.