ಮೈಸೂರಿನಲ್ಲಿ ಪಟಾಕಿ ಮಳಿಗೆಗಳಿಗೆ ಅಧಿಕಾರಿಗಳ ದಿಢೀರ್ ಭೇಟಿ, ಪರಿಶೀಲನೆ…

ಮೈಸೂರು,ನವೆಂಬರ್, 14,2020(www.justkannada.in): ಕೊರೋನಾ ಹಿನ್ನೆಲೆ ಈ ಬಾರಿ ದೀಪಾವಳಿ ಹಬ್ಬದಲ್ಲಿ ಪಟಾಕಿ ಮಾರಾಟ ಮತ್ತು ಸಿಡಿಸುವುದಕ್ಕೆ ನಿರ್ಬಂಧ ಹೇರಿರುವ ರಾಜ್ಯ ಸರ್ಕಾರ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ ನೀಡಿದೆ. officer- inspection –fireworks- shops - Mysore.

ಈ ಮಧ್ಯೆ ಸುಪ್ರೀಂಕೋರ್ಟ್ ಸಹ ಕೇವಲ ಹಸಿರು ಪಟಾಕಿಗಳನ್ನು ಮಾರಾಟ ಮಾಡಲು ನಿರ್ದೇಶನ ನೀಡಿದೆ. ಅದ್ದರಿಂದ ಪಟಾಕಿ ಮಳಿಗೆಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಅಂತೆಯೇ  ಮೈಸೂರಿನ ಜೆ.ಕೆ. ಮೈದಾನದಲ್ಲಿರುವ ಪಟಾಕಿ ಮಳಿಗೆಗಳಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕೇವಲ ಹಸಿರು ಪಟಾಕಿಗಳನ್ನು ಮಾತ್ರವೇ ಮಾರಾಟ ಮಾಡಲು ಮಾರಾಟಗಾರರಿಗೆ ಅನುಮತಿ ನೀಡಲಾಗಿದ್ದು, ಹೀಗಾಗಿ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಸದ್ಯ ತಾತ್ಕಾಲಿಕವಾಗಿ ಪಟಾಕಿ ವ್ಯಾಪಾರಕ್ಕೆ ತಡೆ ನೀಡಿದ್ದಾರೆ.officer- inspection –fireworks- shops - Mysore.

ಇನ್ನು ಪರಿಶೀಲನೆ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳುವ  ಸಾಧ್ಯತೆ ಇದೆ. ನಮಗೆ ಸರ್ಕಾರದ ಆದೇಶಗಳಲ್ಲಿ ಗೊಂದಲವಿದೆ ಹಾಗಾಗಿ ಇದೊಂದು ಬಾರಿ ಮಾರಾಟಕ್ಕೆ ಅನುಮತಿ ನೀಡುವಂತೆ ಪಟಾಕಿ ಮಾರಾಟಗಾರರು ಅಧಿಕಾರಿಗಳ ಬಳಿ ಮನವಿ ಮಾಡಿದ್ದಾರೆ.

Key words: officer- inspection –fireworks- shops – Mysore.