ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ತೀರಾ ಅಪರೂಪದ ಒಕ್ಕಯ್ ಮಾಸ್ತಿಕಲ್ಲು ಪತ್ತೆ.

ಕೋಲಾರ,ಜನವರಿ,14,2025 (www.justkannada.in): ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೇ ತೀರಾ ಅಪರೂಪದ ಒಕ್ಕಯ್ ಮಾಸ್ತಿಕಲ್ಲು ಪತ್ತೆಯಾಗಿದೆ.

ಗೌರಿಬಿದನೂರು ತಾಲ್ಲೂಕಿನ ನಕ್ಕಲಹಳ್ಳಿ ಗ್ರಾಮದಲ್ಲಿ ಸರ್ವೆ ಕಾರ್ಯದ ಸಮಯದಲ್ಲಿ ಪ್ರಕಾಶ್ ಎಂಬುವವರ ಜಮೀನಿನಲ್ಲಿ ಒಕ್ಕಯ್ ಮಾಸ್ತಿಕಲ್ಲು ಪತ್ತೆಯಾಗಿದ್ದು ಶಿಲ್ಪದ ದೃಷ್ಟಿಯಿಂದ ತುಂಬಾ ವಿಶೇಷವೆನಿಸಿದೆ. ಶಿಲ್ಪದಲ್ಲಿ ಒಕ್ಕಯ್ ವೊಂದಿಗೆ ಮೂರು ಹಂತದ ಶಿಲ್ಪಗಳಿವೆ. ಕೆಳಗಿನ ಹಂತದಲ್ಲಿ ವೀರನು ಬಿಲ್ಲಿನೊಂದಿಗೆ ನೀತಿದ್ದಾನೆ. ಹಿಂದೆ ಮಡದಿ ನೀತಿದ್ದಾಳೆ ವೀರ ಯುದ್ಧದಲ್ಲಿ ಮಡಿದಾಗ ಮಡದಿ ಸತಿಯಾಗಿದ್ದಾಳೆ. ಮೇಲಿನ ಹಂತದಲ್ಲಿ ಸತಿಪತಿಯರು ಕೈಲಾಸವಾಸಿಗಳಾಗಿದ್ದಾರೆ.

ಈ ಶಿಲ್ಪದಲ್ಲಿ ವಿಶೇಷವಾಗಿ ಗಮನ ಸೆಳೆಯುವುದು ಮಧ್ಯದ ಹಂತದ ಶಿಲ್ಪ. ಮಧ್ಯದ ಹಂತದ ಶಿಲ್ಪದಲ್ಲಿ ಸತಿಯಾಗಲು ಅಣಿಯಾದ ಮಹಿಳೆ ತನ್ನ ಮಗುವಿಗೆ ಹಾಲುಣಿಸುತ್ತಿದ್ದಾಳೆ. ಮಹಿಳೆಗೆ ಆಗ ಎರಡು ಆಯ್ಕೆಗಳಿದ್ದವು ಒಂದು ಗಂಡ ಯುದ್ಧದಲ್ಲಿ ಮಡಿದಾಗ ತಾನೂ ಸತಿಯಾಗಿ ಮಡಿಯುವುದು ಅಥವಾ ಮಗುವಿಗೆ ಆಸರೆಯಾಗಿ ಬದುಕುವುದು. ಆಕೆ ಮೊದಲನೆಯದನ್ನು ಆಯ್ಕೆಮಾಡಿಕೊಂಡು ಕೊನೆಯದಾಗಿ ತನ್ನ ಮಗುವಿಗೆ ಹಾಲುಣಿಸಿ ಮಗುವನ್ನು ನೆಂಟರಿಸ್ಟರಿಗೆ ಒಪ್ಪಿಸಿ ತಾನು ಸತಿಯಾಗಿದ್ದಾಳೆ. ಇದು ಒಂದು ವಿಶಿಷ್ಟ ಒಕ್ಕಯ್ ಮಾಸ್ತಿ ಕಲ್ಲೆಂದು ನನ್ನ ಅಭಿಪ್ರಾಯ ಎಂದು ಕೆ. ಧನಪಾಲ್ ತಿಳಿಸಿದ್ದಾರೆ.

Key words: Okkay mastic, stone ,found, Kolar, Chikkaballapur