ಏಥರ್ ಅಷ್ಟೆ ಅಲ್ಲ ಓಲಾ ಕಂಪನಿ ರಾಜ್ಯ ತೊರೆಯಲು ಬಿಜೆಪಿ ಸರಕಾರ ಕಾರಣ: ಎಂ ಬಿ ಪಾಟೀಲ

BJP govt responsible for Ola and Ather leaving state: M B Patil

Hon'ble Minister M.B. Patil , Shri Selvakumar S, Smt Gunjan Krishna with the delegates from Yamaha Motor Corp

 

ಬೆಂಗಳೂರು ಜೂ.27,2024: (www.justkannada.in news )ವಿದ್ಯುತ್ ಚಾಲಿತ ವಾಹನ ತಯಾರಿಕೆ ಕ್ಷೇತ್ರದಲ್ಲಿ ಹೆಸರು ಮಾಡಿರುವ ಏಥರ್ ಕಂಪನಿಯು ರಾಜ್ಯವನ್ನು ಬಿಟ್ಟು ಮಹಾರಾಷ್ಟ್ರಕ್ಕೆ ಸ್ಥಳಾಂತರಗೊಳ್ಳುವ ನಿರ್ಧಾರ ಮಾಡಿರುವುದಕ್ಕೆ ಹಿಂದಿನ ಬಿಜೆಪಿ ಸರಕಾರದ ವೈಫಲ್ಯವೇ ಮೂಲಕಾರಣ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಗುರುವಾರ ತರಾಟೆಗೆ ತೆಗೆದುಕೊಂಡಿದ್ದಾರೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಅವರು ರಾಜ್ಯ ಕಾಂಗ್ರೆಸ್ ಸರಕಾರದ ಬೇಜವಾಬ್ದಾರಿಯಿಂದಾಗಿ ಏಥರ್ ಕಂಪನಿ ರಾಜ್ಯದಿಂದ ಕಾಲ್ತೆಗೆದಿದೆ ಎಂದು ಮಾಡಿರುವ ಆರೋಪಕ್ಕೆ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ.

ಬಸವರಾಜ ಬೊಮ್ಮಾಯಿ ಸರಕಾರವಿದ್ದಾಗ ಏಥರ್ ಕಂಪನಿಯು ತನ್ನ ಘಟಕ ಸ್ಥಾಪಿಸಲು 50 ಎಕರೆ ಜಮೀನು ಕೇಳಿತ್ತು. ಆದರೆ ಅವರ ಸರಕಾರವು ಕೇವಲ 35 ಎಕರೆ ಮಂಜೂರು ಮಾಡಿತು. ಇದರಲ್ಲೂ ಐದು ಎಕರೆ ವಿವಾದಕ್ಕೆ ಒಳಗಾಗಿತ್ತು. ಇದರಿಂದ ರೋಸಿ ಹೋದ ಕಂಪನಿಯು ಇಡೀ 35 ಎಕರೆಯನ್ನು ಸರಕಾರಕ್ಕೆ ವಾಪಸ್ ಒಪ್ಪಿಸಿತು. ಇದಾದ ಮೇಲೆ ಆ ಕಂಪನಿಯು ಬೇರೆಬೇರೆ ಕಾರಣಗಳಿಗೋಸ್ಕರ ರಾಜ್ಯವನ್ನು ಬಿಟ್ಟು ಮಹಾರಾಷ್ಟ್ರಕ್ಕೆ ತೆರಳಿ, ಅಲ್ಲಿ ಹೂಡಿಕೆ ಮಾಡುವ ತೀರ್ಮಾನ ಕೈಗೊಂಡಿತು ಎಂದು ಅವರು ವಿವರಿಸಿದ್ದಾರೆ.

ಹಿಂದೆ 2017ರಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗಲೇ ಇವಿ ನೀತಿ ಮಾಡಲಾಯಿತು. ಅದರ ನಂತರ ಬಂದ ಬಿಜೆಪಿ ಸರಕಾರವು ಅದನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ಕೆಲಸ‌ ಮಾಡಲಿಲ್ಲ. ಎಲ್ಲದರಲ್ಲೂ ವಿಫಲವಾಗಿತ್ತು. ಈಗ ಆ ಪಕ್ಷದ ನಾಯಕರು ಏಥರ್ ಕಂಪನಿಯ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಅವರ ಕಾಲದಲ್ಲಿ ಓಲಾ ಕಂಪನಿಯು ರಾಜ್ಯದಿಂದ ತಮಿಳುನಾಡಿಗೆ ಹೋಯಿತು. ಬೆಲ್ಲದ್ ಅವರು ಇದನ್ನು ನೆನಪು ಮಾಡಿಕೊಳ್ಳಬೇಕು ಎಂದು ಅವರು ಕುಟುಕಿದ್ದಾರೆ.

Hon’ble Minister M.B. Patil , Shri Selvakumar S, Smt Gunjan Krishna with the delegates from Yamaha Motor Corp

ಇಷ್ಟಾದರೂ ನಾವು ಏಥರ್ ಕಂಪನಿಗೆ ನಮ್ಮ ಸರಕಾರ ಬಂದಮೇಲೆ ಏಕಗವಾಕ್ಷಿ ಯೋಜನೆಯಡಿ ಹರಳೂರು-ಮುದ್ದೇನಹಳ್ಳಿ ನಡುವೆ 50 ಎಕರೆ ಜಮೀನು ಕೊಡುವುದಾಗಿ ಹೇಳಲಾಗಿತ್ತು. ಆ ವೇಳೆಗಾಗಲೇ ಅವರು ಮಹಾರಾಷ್ಟ್ರ ಕ್ಕೆ ಹೋಗಿ ಆಗಿತ್ತು ಎಂದು ಅವರು ರಾಜ್ಯಕ್ಕೆ ಬರಲು ಹಿಂದೇಟು ಹಾಕಿದರು ಎಂದು ಪಾಟೀಲ ಹೇಳಿದ್ದಾರೆ.

key words: BJP govt, responsible for, Ola and Ather, leaving state, M B Patil

SUMMARY:

Previous Bommai Government Responsible for Ather Leaving the State: MB Patil

Bengaluru: Large and Medium Industries Minister MB Patil on Thursday blamed the previous BJP government for EV frontrunner Ather’s decision to relocate its operations to Maharashtra from Karnataka.

Patil’s response came after BJP President BY Vijayendra’s post on “X” and MLA Aravind Bellad’s statement accused the Congress government of negligence leading to Ather’s departure from the state.

“The previous BJP government had sanctioned only 35 acres to Ather, despite the company’s request for 50 acres. Out of which 5 acres of the allocated land were mired in controversy. Frustrated by these issues, Ather returned the land and ultimately decided to shift to Maharashtra,” Patil explained.

He further elaborated that the Congress government had introduced a forward-looking EV policy in 2017, but the subsequent BJP administration failed to capitalise on it. Patil pointed out that BJP leaders, who are now criticising the Congress over Ather, remained silent when Ola chose Tamil Nadu over Karnataka. “Bellad should remember this,” he added.

Despite these challenges, the recent Congress government promised to sanction 50 acres for Ather near Haraluru-Muddenahalli under the single-window scheme. However, by then, Ather had already decided to move to Maharashtra, Patil noted.