ಮೈಸೂರು,ಮಾರ್ಚ್,6,2025 (www.justkannada.in): ಮೈಸೂರಿನ ರಂಗಾಯಣ ಆವರಣದ ಕಲಾಮಂದಿರದಲ್ಲಿ ಮಾರ್ಚ್ 9 ಭಾನುವಾರದಂದು ಸಂಜೆ 6 ಗಂಟೆಗೆ ಶ್ರೀಮದ್ ರಾಮಾಯಣ ನಾಟಕ ಪ್ರದರ್ಶನ ಆಯೋಜನೆ ಮಾಡಲಾಗಿದೆ.
ಸಿಂಧುವಲ್ಲಿ ಅನಂತಮೂರ್ತಿ ಯವರ ಕನಸಿನ ಮನೆ ಕಲಾಸುರುಚಿಯ ವತಿಯಿಂದ ಈ ನಾಟಕ ಪ್ರದರ್ಶನಗೊಳ್ಳುತ್ತಿದೆ. ಈ ನಾಟಕ ಬರೋಬ್ಬರಿ 3 ಗಂಟೆ 30 ನಿಮಿಷಗಳಿದ್ದು, ಸುಮಾರು 30 ತರುಣ ತರುಣಿಯರು ತಮ್ಮ ಕೆಲಸ ಓದಿನ ನಡುವೆಯೂ ನಾಟಕದಲ್ಲಿ ಬಣ್ಣಹಚ್ಚಲಿದ್ದಾರೆ.
ಈ ನಾಟಕ ಪ್ರದರ್ಶನಕ್ಕೆ ಮೈಸೂರಿನ ಪ್ರಖ್ಯಾತ ವಾದ್ಯಗಾರರು, ವಿದ್ವಾನ್ ಜಯರಾಂ, ಕ್ಲಾರಿಯೋನೆಟ್ ಅಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಿ ರಾಮು ಅವರು ಸಹಕರಿಸಿದ್ದು, ಶ್ರೀ ರಾಜೇಶ್ವರಿ ವಸ್ತ್ರಾಲಂಕಾರ ದ ವರ್ಣಾಲಂಕಾರದ ಝಲಕ್, ಮಧು ನೀನಾಸಂ ಅವರ ಬೆಳಕಿನ ಜಾದೂ ನೋಡಿ ಕಣ್ತುಂಬಿಕೊಳ್ಳಬಹುದು. ಈ ನಾಟಕ ಈಗಾಗಲೇ ಮೂರು ಹೌಸ್ ಫುಲ್ ಶೋ ನಡೆದಿದೆ.
Key words: Old Ramayana, play, mysore, March 9th