ಬಸ್’ನಲ್ಲಿ ಅಂಟಿಸಿದ್ದ ಅಪ್ಪು ಫೋಟೋ ನೋಡಿಕೊಂಡು ಅಜ್ಜಿ ಕಣ್ಣೀರು: ವೈರಲ್ ಆಯ್ತು ವಿಡೀಯೋ

ಬೆಂಗಳೂರು, ನವೆಂಬರ್ 13, 2021 (www.justkannada.in): ಕೊಪ್ಪಳ ಜಿಲ್ಲೆಯ ಕುಕನೂರು ಬಸ್​ ನಿಲ್ದಾಣದಲ್ಲಿ ನಡೆದ ಒಂದು ಘಟನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬಸ್​ ಮೇಲೆ ಅಂಟಿಸಿದ್ದ ಜಾಹೀರಾತಿನಲ್ಲಿ ಇರುವ ಪುನೀತ್ ಫೋಟೋಗೆ ವೃದ್ಧೆಯೊಬ್ಬರು ಮುತ್ತಿಟ್ಟು ಕಂಬನಿ ಸುರಿಸಿದ್ದಾರೆ. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪುನೀತ್​ ಭಾವಚಿತ್ರಕ್ಕೆ ಅಜ್ಜಿ ಮುತ್ತಿಟ್ಟು ಕಣ್ಣೀರು ಹಾಕುತ್ತಿರುವ ಆ ದೃಶ್ಯ ಸ್ಥಳೀಯರ ಮೊಬೈಲ್​ನಲ್ಲಿ ಸೆರೆ ಆಗಿದೆ. ಅದೀಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಅಪ್ಪು ಸಮಾಧಿಗೆ ಪ್ರತಿ ದಿನ ಸಾವಿರಾರು ಜನರು ಭೇಟಿ ನೀಡುತ್ತಿದ್ದಾರೆ. ಬೆಂಗಳೂರಿನಲ್ಲಿ ನ.16ರಂದು ಚಿತ್ರರಂಗದ ವತಿಯಿಂದ ‘ಪುನೀತ್​ ನಮನ’ ಕಾರ್ಯಕ್ರಮ ನಡೆಯಲಿದೆ.