ಮೈಸೂರು ಒಲಂಪಿಯಾ ಟಾಕೀಸ್‌ ಗೋಡೆ ಕುಸಿತ ಪ್ರಕರಣಕ್ಕೆ ಯಾರು ಹೊಣೆ..!

Who is responsible for the wall collapse of Mysore Olympia Talkies?

 

ಮೈಸೂರು, ಜು,26,2024: (www.justkannada.in news) ನಗರದ ಜನನಿಬಿಡ ಪ್ರದೇಶಗಳ ಬಹುತೇಕ ಫುಟ್‌ಪಾತ್‌ ಅತಿಕ್ರಮಣ. ರಸ್ತೆ ಬದಿ ವ್ಯಾಪಾರದ ಸಲುವಾಗಿ ಸಾರ್ವಜನಿಕರ ಓಡಾಟಕ್ಕೂ ಅವಕಾಶ ಇಲ್ಲದಂತಾಗಿದೆ.

ಕೆಲ ದಿನಗಳ ಹಿಂದೆ ನಡೆದ ಗೋಡೆ ಕುಸಿತ ಪ್ರಕರಣದಿಂದ ಫುಟ್‌ ಪಾತ್‌ ವ್ಯಾಪಾರಿಗಳು ಸಾವಿನ ದವಡೆಯಿಂದ ಕೂದಲೆಳೆಯಲ್ಲಿ ಪಾರಾಗಿದ್ದಾರೆ. ವ್ಯಾಪಾರಕ್ಕೆ ಧಕ್ಕೆಯಾಗುವ ನೆಪವೊಡ್ಡಿ ಕಟ್ಟಡ ನವೀಕರಣಕ್ಕೆ ಅಡ್ಡಿಪಡಿಸಿದ್ದರಿಂದಲೇ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.

ಹನುಮಂತರಾವ್ ರಸ್ತೆಯನ್ನೇ ಸಂಪೂರ್ಣ ಅತಿಕ್ರಮಿಸಿಕೊಂಡು ಬಟ್ಟೆ ವ್ಯಾಪಾರ ಮಾಡಲಾಗುತ್ತಿದೆ. ಇವರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಒಲಂಪಿಯಾ ಚಿತ್ರಮಂದಿರದ ನವೀಕರಣದ ವೇಳೆಯಲ್ಲೂ ರಸ್ತೆ ಬಂದ್ ಮಾಡದೇ ವ್ಯಾಪಾರ ವಹಿವಾಟು ನಡೆಸಲಾಗುತ್ತಿದೆ.

ಪ್ರೇಕ್ಷಕರ ಕೊರತೆಯಿಂದಾಗಿ ಚಲನಚಿತ್ರ ಪ್ರದರ್ಶನ ಸ್ಥಗಿತಗೊಳಿಸಿದ್ದ ಚಿತ್ರಮಂದಿರದ ಮಾಲೀಕರು, ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಲು ತೀರ್ಮಾನಿಸಿದ್ದರು. ಅದರಂತೆ, ಮುಂಭಾಗದಿಂದ ಕಾಮಗಾರಿಯನ್ನು ಶುರು ಮಾಡಿಸಿದ್ದರು. ಆದರೆ, ಹಿಂಭಾಗ ಗೋಡೆ ಕೆಡವದೆ ಹಾಗೇ ಬಿಟ್ಟಿದ್ದರಿಂದ್ದ ಈ ದುರ್ಘಟನೆ ನಡೆದಿದೆ.

key words:  Who is responsible, for the wall collapse, of Mysore, Olympia Talkies?