ಬೆಂಗಳೂರು, 22 ಜನವರಿ, 2021 (www.justkannada.in): ಒಲಿಂಪಿಕ್ ಕ್ರೀಡಾಕೂಟ ಜುಲೈ 23ಕ್ಕೆ ಆರಂಭವಾಗಲಿದೆ.
ಒಲಿಂಪಿಕ್ಸ್ ಕ್ರೀಡೆಯನ್ನು ಮುಂದೂಡಲಾಗುತ್ತಿದೆ ಎಂಬ ವರದಿಯನ್ನು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ(ಐಒಸಿ) ತಳ್ಳಿ ಹಾಕಿದೆ.
ಐಒಸಿ ಅಧ್ಯಕ್ಷ ಥಾಮಸ್ ಬಚ್ ಮತ್ತು ಸ್ಥಳೀಯ ಸಂಘಟಕರು ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಈ ಹಿಂದೆ ಕ್ರೀಡಾಕೂಟವನ್ನು 10 ತಿಂಗಳುಗಳ ಕಾಲ ಮುಂದೂಡಲಾಗಿತ್ತು.
ಇದೀಗ ಮತ್ತೆ ಪಂದ್ಯ ಆಯೋಜನೆಗೆ ಧಕ್ಕೆ ಎದುರಾಗಿದೆಯೇ ಎಂಬ ಆತಂಕ ಉಂಟಾಗಿದೆ. ಆದರೆ ಈ ಸುದ್ದಿಯನ್ನು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ನಿರಾಕರಿಸಿದೆ.