ನಿವೃತ್ತ ಡಿಜಿ-ಐಜಿಪಿ ಓಂ ಪ್ರಕಾಶ್ ಕೊಲೆ ಕೇಸ್: ಪತ್ನಿ ಪಲ್ಲವಿ ಬಂಧನ

ಬೆಂಗಳೂರು,ಏಪ್ರಿಲ್,21,2025 (www.justkannada.in):  ನಿವೃತ್ತ  ಪೊಲೀಸ್ ಮಹಾ ನಿರ್ದೇಶಕ ಓಂಪ್ರಕಾಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪತ್ನಿ ಪಲ್ಲವಿ ಅವರನ್ನ ಹೆಚ್ ಎಸ್ ಆರ್ ಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಓಂ ಪ್ರಕಾಶ್  ಅವರನ್ನು ಪತ್ನಿ ಪಲ್ಲವಿ ಅವರೇ ಕೊಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದ್ದು ನಿನ್ನೆ ಹೆಚ್ ಎಸ್ ಆರ್ ಲೇಔಟ್ ಠಾಣಾ ಪೊಲೀಸರು ಅವರನ್ನ ವಶಕ್ಕೆ ಪಡೆದಿದ್ದರು. ಇದೀಗ ವಿಚಾರಣೆ ಬಳಿಕ ಪಲ್ಲವಿ ಅವರನ್ನ ಬಂಧಿಸಿದ್ದಾರೆ ಎನ್ನಲಾಗಿದೆ. ಇಂದು ಸಂಜೆ ವೇಳೆಗೆ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಸಿದ್ದತೆ ನಡೆಸಿದ್ದಾರೆ.

ನಿವೃತ್ತ ಡಿಜಿ-ಐಜಿಪಿ ಓಂಪ್ರಕಾಶ್ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪುತ್ರ ಕಾರ್ತೀಕೇಶ್ ದೂರು ನೀಡಿದ್ದರು. ಆ ದೂರಿನನ್ವಯ ಹೆಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆ ಯಲ್ಲಿ ಎಫ್ಐಆರ್ ದಾಖಲಾಗಿದೆ.

Key words: Retired DG-IGP, Om Prakash, murder, case, wife, arrested