ಒಮಿಕ್ರಾನ್ ವೇಗವಾಗಿ ಹರಡುತ್ತೆ : ಪರಿಣಾಮ ಮಾತ್ರ ಕಡಿಮೆ ಇದೆ- ಸಿಎಂ ಬಸವರಾಜ ಬೊಮ್ಮಾಯಿ.

ಬೆಂಗಳೂರು,ಡಿಸೆಂಬರ್,4,2021(www.justkannada.in): ಒಮಿಕ್ರಾನ್ ಸೋಂಕು ವೇಗವಾಗಿ ಹರಡುತ್ತೆ ಎನ್ನುತ್ತಿದ್ದಾರೆ. ಆದರೆ ಒಮಿಕ್ರಾನ್ ಪರಿಣಾಮ ಮಾತ್ರ ಕಡಿಮೆ ಇದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ,ರಾಜ್ಯದಲ್ಲಿ ಈಗಾಗಲೇ ಒಮಿಕ್ರಾನ್ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಮಹತ್ವದ ಕ್ರಮಗಳನ್ನು ಕೈಗೊಂಡಿದ್ದು, ಶಾಲಾ-ಕಾಲೇಜು ಮಕ್ಕಳ ಪೋಷಕರು, ಸಿಬ್ಬಂದಿಗೂ 2 ಡೋಸ್ ಲಸಿಕೆ ಕಡ್ಡಾಯ ಮಾಡಲಾಗಿದೆ ಎಂದರು.

ಒಮಿಕ್ರಾನ್ ಸೋಂಕಿನ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಒಮಿಕ್ರಾನ್ ಸೋಂಕಿಗೆ ಹೇಗೆ ಚಿಕಿತ್ಸೆ ನೀಡಬೇಕು ಎಂಬುದರ ಕುರಿತು ಮಾಹಿತಿ ಪಡೆಯಲಾಗುತ್ತಿದೆ. ಇನ್ನು ಮೊದಲ ಕೊರನಾ ಪ್ರಕರಣಗಳಿಗೆ ಕ್ಲಸ್ಟರ್ ಎಂದು ಕರೆಯಲಾಗುತ್ತಿತ್ತು. ಈಗ 3 ಪ್ರಕರಣಗಳಿಗೆ ಕ್ಲಸ್ಟರ್ ಮಾಡಲಾಗುತ್ತಿದೆ. ಅಪಾರ್ಟ್ ಮೆಂಟ್ ಭೇಟಿಗೂ ಇನ್ಮುಂದೆ 2 ಡೋಸ್ ಲಸಿಕೆ ಕಡ್ಡಾಯ ಮಾಡಲಾಗಿದೆ  ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

Key words: Omicron –spreading- fast-effect –minimal-CM-Basavaraja Bommai.

ENGLISH SUMMARY…

Omicron will spread faster, but not harmful: CM Basavaraj Bommai
Bengaluru, December 4,2021 (www.justkannada.in): “According to experts, the new COVID variant Omicron spreads faster but is not much harmful,” opined Chief Minister Basavaraj Bommai.
Addressing the media persons in Bengaluru today, he informed that the State Government has taken several significant measures soon after coming to know about the finding of the new variant in the State. Accordingly, both the parents of the school and college-going children should have compulsorily taken both doses of the vaccine.
“We are collecting more information about the new variant, including the treatment details. Clusters will be formed at places where three cases are found. Two doses of vaccine have been made compulsory to visit apartment complexes,” he added.
Keywords: Chief Minister/ Basavaraj Bommai/ Omicron/ not harmful