ಬೆಂಗಳೂರು, ಡಿಸೆಂಬರ್ 12, 2021 (www.justkannada.in): ಭಾರತೀಯರ ಪಾಲಿಗೆ ಒಂದು ಸಮಾಧಾನಕರ ಸುದ್ದಿ ಸಿಕ್ಕಿದೆ.
ಒಮಿಕ್ರಾನ್ ರೂಪಾಂತರಿ ಭಾರತದಲ್ಲಿ ಹೆಚ್ಚು ಪ್ರಭಾವ ಬೀರುವ ಸಾಧ್ಯತೆಗಳು ಕಡಿಮೆ ಇವೆ ಎಂದು ತಜ್ಞರು ಹೇಳಿದ್ದಾರೆ.
ಈ ಹಿಂದಿನ ಡೆಲ್ಟಾ ಮತ್ತು ಡೆಲ್ಟಾ ಪ್ಲಸ್ ವೇರಿಯಂಟ್ಗೆ ಹೋಲಿಕೆ ಮಾಡಿದರೆ, ಒಮಿಕ್ರಾನ್ ರೂಪಾಂತರಿ ಪ್ರಭಾವ ತೀರಾ ಕಡಿಮೆ ಇರಲಿದೆ ಎಂದು ತಜ್ಞರು ಮಾಹಿತಿ ಹಂಚಿಕೊಂಡಿದ್ದಾರೆ.
ಭಾರತೀಯರಲ್ಲಿ ಪ್ರತಿಕಾಯ ಹೆಚ್ಚು: ತಜ್ಞರ ಪ್ರಕಾರ ಭಾರತದ ಶೇ.70ರಷ್ಟು ಮಂದಿಯಲ್ಲಿ ಈಗಾಗಲೇ ಪ್ರತಿಕಾಯ ಸೃಷ್ಟಿಯಾಗಿದೆ. ಹಾಗೆಯೇ ದೊಡ್ಡ ನಗರಗಳಲ್ಲಿನ ಶೇ.90 ಮಂದಿಯಲ್ಲಿ ಪ್ರತಿಕಾಯ ಬೆಳೆದಿದೆ. ಹೀಗಾಗಿ ಒಮಿಕ್ರಾನ್ ಅಪಾಯ ಕಡಿಮೆ ಎನ್ನಲಾಗಿದೆ.