ನವದೆಹಲಿ,ಸೆಪ್ಟಂಬರ್,9,2022(www.justkannada.in): ಬ್ರಿಟನ್ ರಾಣಿ ಎಲಿಜಬತ್ II ನಿಧನರಾದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 11 ರಂದು ಭಾರತದಾದ್ಯಂತ ಒಂದು ದಿನದ ಶೋಕಾಚರಣೆಯನ್ನು ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ರಾಣಿ ಎಲಿಜಬೆತ್ ಅವರ ನಿಧನದ ಗೌರವಾರ್ಥವಾಗಿ ಸೆಪ್ಟೆಂಬರ್ 11 ರಂದು ಭಾರತದ ಎಲ್ಲ ರಾಜ್ಯಗಳಲ್ಲೂ ಈ ದಿನದಂದು ಶೋಕಾಚರಣೆಯನ್ನು ಆಚರಿಸಲಾಗುವುದು ಎಂದು ಗೃಹ ವ್ಯವಹಾರಗಳ ಸಚಿವಾಲಯ ಇಂದು ಪ್ರಕಟಿಸಿದೆ.
ಬ್ರಿಟನ್ ರಾಣಿ ಎಲಿಜಬೆತ್ II ನಿನ್ನೆ ನಿಧನರಾದರು. ಅಗಲಿದ ಗಣ್ಯರಿಗೆ ಗೌರವ ಸೂಚಕವಾಗಿ, ಭಾರತ ಸರ್ಕಾರವು ಸೆಪ್ಟೆಂಬರ್ 11 ರಂದು ಒಂದು ದಿನದ ಶೋಕಾಚರಣೆಯನ್ನು ಆಚರಿಸಲು ನಿರ್ಧರಿಸಿದೆ ಎಂದು ಭಾರತ ಸರ್ಕಾರ ಪತ್ರಿಕಾ ಪ್ರಕಟಣೆ ತಿಳಿಸಿದೆ.
Key words: One day -mourning – India -September 11- Elizabeth II- death